ಚೀನಾದಲ್ಲಿ ಸ್ಥಳೀಯವಾಗಿ 8 ಹೊಸ ಕೊರೋನ ಪ್ರಕರಣ ಪತ್ತೆ
ಬೀಜಿಂಗ್, ಜೂನ್ 9 : ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಸ್ಥಳೀಯವಾಗಿ ಹರಡುವ 8 ಹೊಸ ಕೊರೋನ ಪ್ರಕರಣಗಳು ಚೀನಾದ ಮುಖ್ಯ ಭೂಭಾಗದಲ್ಲಿ ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಅದೇ ದಿನ ಮುಖ್ಯ ಭೂಭಾಗದಲ್ಲಿ 8 ಹೊಸ ಆಮದು ಪ್ರಕರಣಗಳು ಸಹ ಪತ್ತೆಯಾಗಿವೆ ಅವುಗಳಲ್ಲಿ, ಬೀಜಿಂಗ್, ಶಾಂಘೈ ಮತ್ತು ಸಿಚುವಾನ್‌ನಲ್ಲಿ ತಲಾ 2, ಮತ್ತು ಫ್ಯೂಜಿಯಾನ್ ಮತ್ತು ಗುವಾಂಗ್‌ಡಾಂಗ್‌ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.ಶಾಂಘೈನಲ್ಲಿ 11 ಹೊಸ ಶಂಕಿತ ಪ್ರಕರಣಗಳು ಮುಖ್ಯ ಭೂಭಾಗದ ಹೊರಗಿನಿಂದ ಬಂದಿವೆ. ರೋಗಕ್ಕೆ ಸಂಬಂಧಿಸಿದ ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದೂ ಆಯೋಗ ತಿಳಿಸಿದೆ.