ಚಿಲಿಯಲ್ಲಿ ಕೊರೋನದಿಂದ ಈವರೆಗೆ 30 ಸಾವಿರಕ್ಕೂ ಹೆಚ್ಚು ಸಾವು
ಸ್ಯಾಂಟಿಯಾಗೊ, ಜೂನ್ 8 : ಚಿಲಿಯಲ್ಲಿ ಹೊಸದಾಗಿ ಸೋಮವಾರ 121 ಸಾವಿನ ಪ್ರಕರಣದ ನಂತರ ದೇಶದಲ್ಲಿ ಈವರೆಗೆ ಕೊರೊನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 30,058 ಕ್ಕೆಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ, ಮಾತಾನಾಡಿದ ಆರೋಗ್ಯ ಸಚಿವ ಎನ್ರಿಕ್ ಪ್ಯಾರಿಸ್ ಕಳೆದ ಕೆಲವು ದಿನಗಳಲ್ಲಿ "ಸಾವುಗಳಲ್ಲಿ ದೊಡ್ಡ ಏರಿಕೆಯಾಗಿದೆ ಎಂದು ಹೇಳಿದರು. ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ 6,958 ಹೊಸ ಪ್ರಕರಣಗಳ ನಂತರ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,434,884 ಕ್ಕೆ ಏರಿಕೆಯಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯತ್ನದಲ್ಲಿ ಮತ್ತು ಹೊಸ ರೂಪಾಂತರಗಳು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಚಿಲಿಯ ಗಡಿ ಮುಚ್ಚುವಿಕೆಯನ್ನು ಇದೆ 30 ರವರೆಗೆ ವಿಸ್ತರಿಸಲಾಗುವುದು ಎಂದು ಉಪ ಆರೋಗ್ಯ ಸಚಿವ ಪೌಲಾ ದಾಜಾ ಹೇಳಿದರು. ಸ್ಯಾಂಟಿಯಾಗೊ ಮೆಟ್ರೋಪಾಲಿಟನ್ ಪ್ರದೇಶದ 11 ಪುರಸಭೆಗಳನ್ನು ಗುರುವಾರದಿಂದ ಲಾಕ್‌ಡೌನ್ ಅಡಿಯಲ್ಲಿ ಇರಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.