ಅಂತರರಾಷ್ಟ್ರೀಯ

ತಗ್ಗಿದ ಸೋಂಕು, ಇಂಗ್ಲೆಂಡ್ ನಲ್ಲಿ ಶಾಲಾ- ಕಾಲೇಜು ಪುನರಾರಂಭ

ತಗ್ಗಿದ ಸೋಂಕು,  ಇಂಗ್ಲೆಂಡ್ ನಲ್ಲಿ ಶಾಲಾ- ಕಾಲೇಜು  ಪುನರಾರಂಭ

ಲಂಡನ್, ಮಾರ್ಚ್ 8: ಬ್ರಿಟನ್ ನಲ್ಲಿ  ಕಳೆದ ಕೆಲವು ವಾರಗಳಿಂದ ಕೊರೋನ   ಸೋಂಕು ಪ್ರಕರಣಗಳು   ಇಳಿಮುಖವಾಗುತ್ತಿದ್ದು,  ಸರ್ಕಾರದ ಮಾರ್ಗಸೂಚಿಯಂತೆ  ಮೊದಲ ಹಂತದಲ್ಲಿ ಇಂಗ್ಲೆಂಡ್‌ನಾದ್ಯಂತ ಶಾಲಾ-  ಮತ್ತು ಕಾಲೇಜುಗಳು ಸೋಮವಾರ ಮತ್ತೆ ತೆರೆಯಲು ಸಜ್ಜಾಗಿದೆ. "ಶಾಲೆಗಳನ್ನು ಪುನಃ ತೆರೆಯುತ್ತಿರುವುದು ಸೋಂಕು  ಸೋಲಿಸುವ ನಿಜವಾದ ರಾಷ್ಟ್ರೀಯ ಪ್ರಯತ್ನ ಸೂಚಿಸುತ್ತದೆ. ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ದೃಡ ನಿಶ್ಚಯದಿಂದಾಗಿ ನಾವು ಸಾಮಾನ್ಯತೆಯ ಪ್ರಜ್ಞೆಗೆ ಹತ್ತಿರವಾಗಿ,   ಯುವಜನರನ್ನು ಮರಳಿ ಪಡೆಯುವುದು ಸರಿಯಾಗಿದ್ದು ತರಗತಿ ಆರಂಭ  ಮೊದಲ ಹೆಜ್ಜೆಯಾಗಿದೆ "ಎಂದು  ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪ್ರಗತಿ ಸಾಧಿಸಲು  ಅಧಿಕಾರಿಗಳು ಎಚ್ಚರಿಕೆಯ ಕ್ರಮ ತೆಗೆದುಕೊಂಡಿದ್ದಾರೆ ಮತ್ತು ವೈಜ್ಞಾನಿಕ ಪುರಾವೆಗಳು ತೋರಿಸಿರುವಂತೆ ಲಸಿಕೆ ಪಡೆಯುವಂತೆ ಪ್ರಧಾನಿ  ಜನರನ್ನು ಒತ್ತಾಯಿಸಿದ್ದಾರೆ. 




ಸುದ್ದಿ ಓದಿ