ಬ್ರೆಜಿಲ್ ನಲ್ಲಿ ಒಂದು ಕೋಟಿ ದಾಟಿದ ಕರೋನ ಸೋಂಕು ಪ್ರಕರಣ
ಮಾಸ್ಕೋ, ಮಾರ್ಚ್ 16 :ಬ್ರೆಜಿಲ್ ನಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ 11.5 ಮಿಲಿಯನ್ ಮೀರಿದೆ ಮತ್ತು ಸಾಂಕ್ರಾಮಿಕ ರೋಗದ ಆರಂಭವಾದ ನಂತರ ಈವರೆಗೆ ದೇಶದಲ್ಲಿ 2ಲಕ್ಷ 79,000 ಕ್ಕೂ ಹೆಚ್ಚು ಜನರು ಮಾರಕ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಈವರೆಗೆ ಒಟ್ಟು 11ಲಕ್ಷ ,519,609 ಪ್ರಕರಣಗಳು ದಾಖಲಾಗಿದ್ದು, ಇದರ ಜೊತೆಗೆ 2ಲಕ್ಷ 79,286 ಸಾವುಗಳು ದಾಖಲಾಗಿವೆ. 10 ದಶಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಕಳೆದ ಒಂದು ದಿನದ ಅವಧಿಯಲ್ಲಿ ಸೋಂಕಿಗೆ 1,057 ಜನರು ಸಾವನ್ನಪ್ಪಿದ್ದು 36,239 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದೂ ಸಚಿವಾಲಯದ ಹೊಸ ಮಾಹಿತಿ ತಿಳಿಸಿದೆ.