ಅಂತರರಾಷ್ಟ್ರೀಯ

ಬ್ರೆಜಿಲ್ : 24 ಗಂಟೆಗಳಲ್ಲಿ 80 ಸಾವಿರ ಹೊಸ ಪ್ರಕರಣ ದಾಖಲು

ಬ್ರೆಜಿಲ್ :  24 ಗಂಟೆಗಳಲ್ಲಿ  80 ಸಾವಿರ ಹೊಸ ಪ್ರಕರಣ  ದಾಖಲು

ಮಾಸ್ಕೋ, ಮೇ 27: ಬ್ರೆಜಿಲ್ ನಲ್ಲಿ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 80 ಸಾವಿರಕ್ಕೂ ಹೆಚ್ಚು ಸೋಂಕು  ಪ್ರಕರಣಗಳು ವರದಿಯಾಗಿದೆ ಎಂದು ರಾಷ್ಟ್ರಿಯ  ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.ಇದೇ ಅವಧಿಯಲ್ಲಿ ದೇಶದಲ್ಲಿ ಕೊರೋನ ಸೋಂಕಿಗೆ  2ಸಾವಿರದ 398 ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಹೇಳಿದೆ. ದೇಶದಲ್ಲಿ  ಸೋಂಕು ಏಕಾಏಕಿ ಪ್ರಾರಂಭವಾದಾಗಿನಿಂದ 14.7 ದಶಲಕ್ಷಕ್ಕೂ ಹೆಚ್ಚು ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದಾರೆ. ಇದಕ್ಕೂ  ಮೊದಲು ಒಂದು ದಿನ ಮುಂಚಿತವಾಗಿ, ದೇಶದಲ್ಲಿ 73 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ದೃಡಪಟ್ಟಿತ್ತು. ವಿಶ್ವದಲ್ಲಿ  ಅಮೆರಿಕಗಿಂತ ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದ್ದರೆ, ದೃಡಪಡಿಸಿದಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ  ಮೂರನೇ ಸ್ಥಾನದಲ್ಲಿದೆ. 


ಸುದ್ದಿ ಓದಿ