ಅಂತರರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ ಜೂನ್‍ 6ರವರೆಗೆ ಕೋವಿಡ್ ಲಾಕ್‍ ಡೌನ್‍ ವಿಸ್ತರಣೆ

ಬಾಂಗ್ಲಾದೇಶದಲ್ಲಿ ಜೂನ್‍ 6ರವರೆಗೆ ಕೋವಿಡ್ ಲಾಕ್‍ ಡೌನ್‍ ವಿಸ್ತರಣೆ

ಢಾಕಾ, ಮೇ 31 :ಕೊರೊನಾವೈರಸ್ ಪ್ರಕರಣಗಳ ಏರಿಕೆ ತಡೆಯುವ ನಿಟ್ಟಿನಲ್ಲಿ ಬಾಂಗ್ಲಾದೇಶ ಸರ್ಕಾರ ಜೂನ್ 6 ರವರೆಗೆ ದೇಶಾದ್ಯಂತ ಲಾಕ್‍ ಡೌನ್‍ ನಿರ್ಬಂಧವನ್ನು ವಿಸ್ತರಿಸಿದೆ. ಲಾಕ್‍ ಡೌನ್‍ ವಿಸ್ತರಣೆ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಸಂಪುಟ ವಿಭಾಗ ಭಾನುವಾರ ಸುತ್ತೋಲೆ ಹೊರಡಿಸಿದೆ. ಈ ತಿಂಗಳ 24 ರಂದು ಬಾಂಗ್ಲಾದೇಶ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಅನ್ನು ಮೇ 30 ಕ್ಕೆ ವಿಸ್ತರಿಸಿತ್ತು. ಆದರೆ ಹೆಚ್ಚು ದೂರದ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿತ್ತು. ಈ ಸೇವೆಗಳು ಈ ತಿಂಗಳ 1ರಿಂದ ಸ್ಥಗಿತಗೊಂಡಿದ್ದವು. ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವುಗಳ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ 1,444 ಹೊಸ ಪ್ರಕರಣಗಳು ಮತ್ತು 34 ಸಾವುಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 798,830 ಕ್ಕೆ ಮತ್ತು ಸಾವಿನ ಸಂಖ್ಯೆ 12,583 ಕ್ಕೆ ತಲುಪಿದೆ.

  


ಸುದ್ದಿ ಓದಿ