ಅಂತರರಾಷ್ಟ್ರೀಯ

ನಕಲಿ ಲಸಿಕೆ ತಯಾರಿಕೆ, 6 ಜನರ ಬಂಧನ

ನಕಲಿ  ಲಸಿಕೆ ತಯಾರಿಕೆ,  6 ಜನರ ಬಂಧನ

ಮೆಕ್ಸಿಕೊ ನಗರ, ಫೆಬ್ರವರಿ 18 : ಅಕ್ರಮ,  ನಕಲಿ  ಲಸಿಕೆ  ತಯಾರಿಕೆ ಆರೋಪದ ಮೇರೆಗೆ  ಮೆಕ್ಸಿಕೊದಲ್ಲಿ 6 ಜನರನ್ನು ಬಂಧಿಸಲಾಗಿದೆ. ಮೆಕ್ಸಿಕೋದ ನ್ಯೂಯೆವೊ ಲಿಯಾನ್ ರಾಜ್ಯದಲ್ಲಿ ಇವರನ್ನು ಬಂಧಿಸಲಾಗಿದೆ  ಎಂದು ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯ ಹೇಳಿದೆ. ಈ ಕುರಿತು  ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ , ನಕಲಿ  ಲಸಿಕೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಈ ರೀತಿಯ ಅಕ್ರಮ ತಯಾರಿಕೆ, ಬಳಕೆ ಸಾರ್ವಜನಿಕ ಆರೋಗ್ಯಕ್ಕೆ ಅಪಾಯಮಾಡಲಿದೆ ಮೆಕ್ಸಿಕನ್ ನಾಗರಿಕರು ಜಾಗರೂಕರಾಗಿರಬೇಕು ಮತ್ತು ಲಸಿಕೆಗಳನ್ನು  ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬೇಕೆಂದು ಸಚಿವಾಲಯ ಜನತೆಗೆ  ಮನವಿ ಮಾಡಿದೆ. 




ಸುದ್ದಿ ಓದಿ