ಮುಧೋಳ

ಮುಧೋಳದಲ್ಲಿ ಗುರು- ಶಿಷ್ಯರ ಆತ್ಮೀಯ ಸಮಾಗಮ ಸ್ನೇಹ ಸಮ್ಮಿಲನ

ಮುಧೋಳದಲ್ಲಿ ಗುರು- ಶಿಷ್ಯರ ಆತ್ಮೀಯ ಸಮಾಗಮ ಸ್ನೇಹ ಸಮ್ಮಿಲನ

ಮುಧೋಳ : ಅಲ್ಲಿ ಸಡಗರವೇ ತುಂಬಿತ್ತು. ಎಲ್ಲರ ಮುಖದಲ್ಲೂ ಉಲ್ಲಾಸ, ಉತ್ಸಾಹ ಎದ್ದು ಕಾಣುತ್ತಿತ್ತು. ಕಳೆದ 25 ವರ್ಷಗಳ ಹಿಂದೆ 1994-1997ರ ಅವಧಿಯಲ್ಲಿ ಮುಧೋಳದ ಎಸ್‌. ಆರ್‌. ಕಂಠಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ. ಎ.  ಪದವಿಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಒಗ್ಗೂಡಿ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರು ವಂದನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.  

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ. ಬಿ. ಬಡಿಗೇರ ಅವರು ಹಳೆಯ ವಿದ್ಯಾರ್ಥಿಗಳ ಸಾಧನೆ ಹಾಗೂ ಪರಿಶ್ರಮ ಮೆಚ್ಚಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಎಸ್‌. ಆರ್‌. ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ. ಆರ್‌. ಪಾಟೀಲ ಅವರು ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.  

ಸಮಾರಂಭದಲ್ಲಿ ತಮಗೆ ವಿದ್ಯಾದಾನ ಮಾಡಿದ  ಸುನಂದಾ  ಮೂಡಲಗಿ, ಬಿ. ಕೆ. ಹಿರೇಮಠ, ಐ. ಎಸ್‌. ಹಿರೇಮಠ, ಜಿ. ಜಿ. ಕೋಟಿ, ಎ.ಜಿ.ಚಪ್ಪಳಗಾಂವ, ಎಂ.ವಿ.ಜಿಗಬಡ್ಡಿ ಹಾಗೂ ಪಿ.ಬಿ.ಬಡಿಗೇರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗಿತು. ಉಜ್ವಲಾ ಚಟ್ನೀಸ, ರೇಖಾ ಹೊಸಮಠ, ಮಂಜುನಾಥ್ ಹೂಗಾರ, ಅಬ್ದುಲ್ ಇಂಡಿಗನಾಳ, ಸುಧಾಕರ ಸಾರವಾಡ, ಕಲ್ಮೇಶ ಹುಣಸಿಕಟ್ಟಿ, ಸಂತೋಷ ಅಥರ್ಗಾ, ಬಾಬು ಮೆಟಗುಡ್ಡ ಹಾಗೂ ಇತರರು ಕಾರ್ಯಕ್ರಮ ನಿರ್ವಹಿಸಿದರು. ವೀರೇಶ ಶೆಟ್ಟರ ನಿರೂಪಿಸಿದರು, ಭಾರತಿ ಗುರವ ಪ್ರಾರ್ಥನೆ  ಹಾಡಿದರು, ಬಾಪು ಖಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು ಅಬ್ದುಲ ಇಂಡಿಗನಾಳ ವಂದಿಸಿದರು 

ಪೋಟೋ;ಎಮ್‌ಡಿಎಲ್‌-26-2;ಮುಧೋಳದ ಕನ್ನಡ ಸಾಹಿತ್ಯ ಪರಿಷತ್ತು ಭೌನದಲ್ಲಿ ನಡೆದ  25 ವರ್ಷಗಳ ಹಿಂದೆ 1994-1997ರ ಅವಧಿಯಲ್ಲಿ ಮುಧೋಳದ ಎಸ್‌. ಆರ್‌. ಕಂಠಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ. ಎ.  ಪದವಿಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸಮಾಗಮ ಸುನಂದಾ  ಮೂಡಲಗಿ, ಬಿ. ಕೆ. ಹಿರೇಮಠ, ಐ. ಎಸ್‌. ಹಿರೇಮಠ, ಜಿ. ಜಿ. ಕೋಟಿ, ಎ.ಜಿ.ಚಪ್ಪಳಗಾಂವ, ಎಂ.ವಿ.ಜಿಗಬಡ್ಡಿ ಇದ್ದರು 


ಸುದ್ದಿ ಓದಿ