ಹುಕ್ಕೇರಿ

ನಮ್ಮ ಜಿವನಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯಕ : ವಿಜಯೇಂದ್ರ

ನಮ್ಮ ಜಿವನಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯಕ : ವಿಜಯೇಂದ್ರ

ಹುಕ್ಕೇರಿ: ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾದ್ಯಕ್ಷ ಶಾಸಕ ಬಿ ವೈ ವಿಜಯೇಂದ್ರ ಹೇಳಿದರು.

ಹುಕ್ಕೇರಿ ನಗರದಲ್ಲಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.ಶನಿವಾರ ಬೆಳಗಿನ ಜಾವ ಹಿರೇಮಠಕ್ಕೆ ಆಗಮಿಸಿದ ವಿಜಯೇಂದ್ರರನ್ನು ಚಂದ್ರಶೇಖರ ಮಹಾಸ್ವಾಮಿಗಳು ಮಠದ ವತಿಯಿಂದ ದಸರಾ ಗೌರವ ನೀಡಿ ಸನ್ಮಾನಿಸದರು.ನಂತರ  ದಸರಾ ದಬರ್ಾರ ಸಭಾಂಗಣದಲ್ಲಿ  ಜರುಗಿದ ಸರಳ ಸಮಾರಂಭದಲ್ಲಿ ಚಂದ್ರಶೇಖರ ಶ್ರೀಗಳನ್ನು ವಿಜಯೇಂದ್ರ ಗೌರವಿಸಿ ಮಾತನಾಡುತ್ತಾ ಪ್ರತಿಯೋಬ್ಬರ ಜೀವನದಲ್ಲಿ ಸಂಸ್ಕಾರ ಸಿಗಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ.

 ಈ ಭಾಗದಲ್ಲಿ ಚಂದ್ರಶೇಖರ ಮಹಾಸ್ವಾಮಿಗಳು ದೈವಿ ಆರಾಧನೆ ,ಧರ್ಮ ಜಾಗ್ರತೆ ಯೊಂದಿಗೆ ಶಿಕ್ಷಣ, ಅನ್ನ ದಾಸೋಹ ಮಾಡುವ ಮೂಲಕ ಎಲ್ಲಾ ವರ್ಗದ ಜನರಿಗೆ ಆಶ್ರಯವಾಗಿ ಬೆಳಕು ನಿಡಿದ್ದಾರೆ ಎಂದರು . ಚಂದ್ರಶೇಖರ ಶ್ರೀಗಳು ಮಾತನಾಡಿ ವೀರಶೈವ ಸಮಾಜದ ಪ್ರಶ್ನಾತೀತ ನಾಯಕ ಹುಕ್ಕೇರಿ ಮಠದ ಶಿಷ್ಯರಾದ ಎಡೆಯೂರಪ್ಪ ನವರು ಹಾಕಿಕೋಟ್ಟ ಮಾರ್ಗದಲ್ಲಿ ನಡೆಯುವ ವಿಜಯೇಂದ್ರರು ಮುಂಬರುವ ದಿನಗಳಲ್ಲಿ ಹೇಚ್ಚಿನ ಅಧಿಕಾರ ಪಡೆದು ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿ ಎಂದರು . ವೇದಿಕೆ ಮೇಲೆ ರಾಜ್ಯ ಮಾಜಿ ಕುರಿ ಮತ್ತು ಉಣ್ಣೆ ನಿಗಮದ ಅದ್ಯಕ್ಷ ಶರಣು, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ, ಉದ್ಯಮಿ ಪೃಥ್ವಿ ಕತ್ತಿ, ಸಂಗಮ ಸಕ್ಕರೆ ಕಾರ್ಖಾನೆ ಅದ್ಯಕ್ಷ ರಾಜೆಂದ್ರ ಪಾಟೀಲ, ಗುರು ಕುಲಕಣರ್ಿ,  ಸುನಿಲ ಪರ್ವತರಾವ , ವೀರಶೈವ ಸಮಾಜದ ತಾಲೂಕಾ ಅದ್ಯಕ್ಷ ಶೀತಲ್ ಬ್ಯಾಳಿ, ಸುರೇಶ ಜಿನರಾಳಿ, ಚನ್ನಪ್ಪಾ ಗಜಬರ,ಪರಗೌಡಾ ಪಾಟೀಲ ಉಪಸ್ಥಿರಿದ್ದರು.ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಭಾರತಿಯ ಜನತಾ ಪಕ್ಷದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ