ಗುನಗಿ ಸಮಾಜದವರು ಶ್ರಮ ಜೀವಿಗಳು ಅನ್ನದಾತರು: ಶಾಸಕಿ ರೂಪಾಲಿ ನಾಯ್ಕ
ಲೋಕದರ್ಶನ
ವರದಿ
ಕಾರವಾರ 15: ಅತ್ಯಂತ ಶ್ರಮಿಕ ಸಮಾಜವಾದ ಗುನಗಿ ಸಮಾಜದವರು ನೈಜವಾಗಿ ಮಣ್ಣಿನ ಮಕ್ಕಳಾಗಿರುತ್ತಾರೆ. ಗುನಗಿ ಸಮಾಜದಲ್ಲೇ ಅತಿ ಹೆಚ್ಚು ಜನರು ಕೃಷಿ ಕಾರ್ಯದಲ್ಲಿ ತೊಡಗಿದ್ದು , ಅವರು ನಮಗೆಲ್ಲ ಅನ್ನ ನೀಡುವ ಅನ್ನದಾತರು. ಸಮಾಜದಲ್ಲಿ ದೈವಿಕ ವಿಧಿ-ವಿಧಾನಗಳಲ್ಲೂ ಗುನಗಿ ಸಮಾಜದ ತನ್ನದೇ ಆದ ವಿಶೇಷತೆ ಹೊಂದಿದೆ. ಎಲ್ಲ ದೇವಸ್ಥಾನ ಧಾಮರ್ಿಕ ಕಾರ್ಯಗಳಲ್ಲಿ ತಲೆತಲಾಂತರದಿಂದ ಗುನಗಿಸಮಾಜಕ್ಕೆ ದೊಡ್ಡ ಜವಾಬ್ದಾರಿ ಇದೆ. ಅವರಿಲ್ಲದೆ ನಮ್ಮ ಧಾಮರ್ಿಕ ಕಾರ್ಯಗಳು ನಡೆಯಲ್ಲ. ಇದರಿಂದ ಗುನಗಿ ಸಮಾಜವು ಈ ಭಾಗದ ಮೂಲ ಪುರುಷರಾಗಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟರು.
ಕಡವಾಡದ ವಿಠೋಬಾ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಜರುಗಿದ ಉತ್ತರಕನ್ನಡ ಜಿಲ್ಲಾ ಗುನಗಿ ಸಮಾಜದ ವಿದ್ಯಾಥರ್ಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗುನಗಿ ಸಮಾಜದಲ್ಲಿ
ಒಳ್ಳೆಯ ಪ್ರತಿಭಾವಂತರಿದ್ದಾರೆ. ಆ ಪ್ರತಿಭೆ ಕೇವಲ
ಶಿಕ್ಷಣಕ್ಕೆ ಸೀಮಿತವಾಗಿಲ್ಲ . ಬೇರೆ ಬೇರೆ ಕ್ಷೇತ್ರದಲ್ಲಿ
ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದರೆ ಅನೇಕ
ಪ್ರತಿಭೆಗಳು ಎಲೆಮರೆಯ ಕಾಯಾಗಿದ್ದು ಅಂತ ಪ್ರತಿಭೆಯನ್ನು ಬೆಳಕಿಗೆ
ತರುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗುನಗಿ ಸಮಾಜದ ಮುತ್ತೈದೆಯರಿಂದ ಶಾಸಕಿ ರೂಪಾಲಿ ನಾಯ್ಕರಿಗೆ ಉಡಿ ತುಂಬುವ ಕಾರ್ಯಕ್ರಮ
ನಡೆಯಿತು. ಕಾರ್ಯಕ್ರಮ ಯಶಸ್ಸಿಗೆ ಕಡವಾಡದ ಗುನಗಿ ಸಮಾಜ ಬಾಂಧವರು ಶ್ರಮಿಸಿ, ಎಲ್ಲರ
ಮೆಚ್ಚುಗೆಗೆ ಪಾತ್ರರಾದರು.
ಗುನಗಿ ಸಮಾಜ ಸಂಘದ ಅಧ್ಯಕ್ಷ
ಪ್ರಕಾಶ ಗುನಗಿ ಸಮಾರಂಭದ ಕೇಂದ್ರಬಿಂದುವಾಗಿದ್ದರು. ಶಾರದಾ ಗುನಗಿ ಸಮಾಜದ ಹಿನ್ನೆಲೆಯ ಕುರಿತು ವಿವರಿಸಿದರು. ಸುಭಾಷ ಗುನಗಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕುಮಟಾ
ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ
ವಿಭಾಗದ ಸಹಾಯಕ ಅಭಿಯಂತರರಾದ ರಾಮದಾಸ ಗೋವಿಂದ ಗುನಗಿ, ತಾ.ಪಂ. ಸದಸ್ಯೆ
ನಂದಿನಿ ಗುನಗಿ, ಚೆಂಡಿಯಾ ಗ್ರಾ. ಪಂ. ಅಧ್ಯಕ್ಷೆ ಗೀತಾ
ಗುನಗಿ, ಸದಸ್ಯೆ ವಿಜಯಾ ಗುನಗಿ, ಕಿನ್ನರ ಗ್ರಾ.ಪಂ. ಸದಸ್ಯೆ
ಪ್ರಿಯಾ ಗುನಗಿ, ಹಾರವಾಡ
ಗ್ರಾ. ಪಂ. ಸದಸ್ಯೆ ಆಶಾ
ಗುನಗಿ, ಸಮಾಜದ ಪ್ರಮುಖರಾದ ರೋಹಿದಾಸ ಗುನಗಿ, ದಿನಕರ ಗುನಗಿ, ಚಂದ್ರಕಾಂತ ಗುನಗಿ, ದಿನಕರ ವಿ. ಗುನಗಿ, ಶಂಕರ
ಗುನಗಿ, ಸುಭಾಷ ಗುನಗಿ, ಕಾರವಾರ ನಗರಸಭೆಯ ಮಾಜಿ ಸದಸ್ಯ ಪ್ರದೀಪ
ಗುನಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 