ನೈಜೀರಿಯಾದಲ್ಲಿ ಬಂದೂಕುಧಾರಿಗಳ ದಾಳಿ: 50 ಜನರ ಸಾವು
ಮಾಸ್ಕೋ, ಜೂನ್ 13 : ನೈಜೀರಿಯಾದ ವಾಯುವ್ಯ ರಾಜ್ಯವಾದ ಜಾಮ್‌ಫಾರಾದಲ್ಲಿ ಶಸ್ತ್ರಸಜ್ಜಿತ ಜಾನುವಾರು ಕಳ್ಳರು ನಡೆಸಿದ ಗುಂಡಿನ ದಾಳಿಗೆ 53 ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ಕುವೈಟ್ ಟೈಮ್ಸ್ ವರದಿ ಮಾಡಿದೆ.ಬಂದೂಕುಧಾರಿಗಳು ಮೋಟಾರ್ ಸೈಕಲ್‌ಗಳಲ್ಲಿ ಬಂದು ಅನೇಕ ಹಳ್ಳಿಗಳ ರೈತರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದರು. ಹಲ್ಲೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಬಿಡೆದೆ ಹಿಂಬಾಲಿಸಿದರು ಎಂದು ಜಮ್‌ಫಾರಾ ಪೊಲೀಸ್ ವಕ್ತಾರ ಮೊಹಮ್ಮದ್ ಶೆಹು ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಗುರುವಾರ ಮತ್ತು ಶುಕ್ರವಾರ ಈ ದಾಳಿ ನಡೆದಿದೆ . ಶುಕ್ರವಾರ ಕನಿಷ್ಠ 14 ಶವಗಳನ್ನು ರಾಜ್ಯ ರಾಜಧಾನಿ ಗುಸೌಗೆ ಕೊಂಡೊಯ್ಯಲಾಗಿದೆ ಎಂದು ಶೆಹು ಹೇಳಿದರು. ಕಳೆದ ವಾರ, ಜುರ್ಮಿ ಜಿಲ್ಲೆಯ ನಿವಾಸಿಗಳು ಪ್ರಮುಖ ಹೆದ್ದಾರಿ ನಿರ್ಬಂಧಿಸಿ, ಹಳ್ಳಿ ಜನರ ಮೇಲಿನ ಮೇಲೆ ಸಶಸ್ತ್ರ ದಾಳಿ, ಅಪಹರಣ ಘಟನೆ ಖಂಡಿಸಿ ಸರಕಾರ, ಅಧಿಕಾರಿಗಳ ಗಮನ ಸೆಳೆದಿದ್ದಾರೆ.