ಬೈಲಹೊಂಗಲ

ಗುಡದೂರ ಗ್ರಾಮ ದೇವತೆ ನೂತನ ದೇವಸ್ಥಾನ ಲೋಕಾರೆ​‍್ಣ ಹಾಗೂ ಹೊಸ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ; ದಿ. 16 ರಿಂದ 27 ವರೆಗೆ ಗ್ರಾಮದೇವಿ ಜಾತ್ರೆ

ಗುಡದೂರ ಗ್ರಾಮ ದೇವತೆ ನೂತನ ದೇವಸ್ಥಾನ ಲೋಕಾರೆ​‍್ಣ ಹಾಗೂ ಹೊಸ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ; ದಿ. 16 ರಿಂದ 27 ವರೆಗೆ ಗ್ರಾಮದೇವಿ ಜಾತ್ರೆ

ಬೈಲಹೊಂಗಲ 15 :  ತಾಲೂಕಿನ ಗುಡದೂರ ಗ್ರಾಮದಲ್ಲಿ ಮಾರ್ಚ್‌  ಗ್ರಾಮದೇವತೆ ನೂತನ ದೇವಸ್ಥಾನ ಲೋಕಾರೆ​‍್ಣ ಹಾಗೂ ಹೊಸ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಮಾರ್ಚ್‌ 16 ರಿಂದ 27 ವರೆಗೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದೇವತೆ ಹಾಗೂ ದುರ್ಗಾದೇವಿ ಮೂರ್ತಿಗಳನ್ನು ಕೂಡ ಹೊಸದಾಗಿ ಮಾಡಿಸಲಾಗಿದೆ.  ಸುಮಾರು 60 ವರ್ಷದ ಹಳೆಯ ದೇವಸ್ಥಾನವನ್ನು ಜೀರ್ನೋದ್ದಾರ ಮಾಡಿ ಸುಮಾರು 40 ಲಕ್ಷ ವೆಚ್ಚದಲ್ಲಿ ನೂತನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.. ಶಾಸಕರ ಸಂಸದರ ಅನುದಾನ ಮತ್ತು ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಣೆ ಮಾಡಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.  

ಇದೆ ಮಾರ್ಚ್‌ 16 ಸೋಮವಾರ ದಿಂದ ಮಾ. 27 ವರೆಗೆ ಜಾತ್ರೆ ನಡೆಯಲಿದೆ. ದಿ 16 ರಂದು ಪಾದಗಟ್ಟೆ ಪೂಜೆ, 17 ರಂದು ದೇವಿ ಉತ್ಸವ ಮೂರ್ತಿಗೆ ಅಭಿಷೇಕ ಹಾಗೂ ಕುಂಕುಮರ್ಚನೆ ನಡೆಯಲಿದೆ. 18 ರಂದು ಧಾರ್ಮಿಕ ವಿಧಿ ವಿಧಾನ ವಿಶೇಷ ಪೂಜೆ ಇರುತ್ತದೆ. 19 ರಂದು ಗ್ರಾಮ ದೇವತೆಯರ ಹೊಸ ಮೂರ್ತಿಗಳನ್ನು ಪೂರ್ಣ ಕುಂಭ, ಭಜನೆ, ಡೊಳ್ಳು ಸಕಲ ಮಂಗಳ ವಾದ್ಯದೊಂದಿಗೆ ಪುರ ಪ್ರವೇಶ ನಡೆಯುತ್ತದೆ.  20 ರಂದು ದೇವಸ್ಥಾನ ನವಗ್ರಹ ಶಾಂತಿ, ವಾಸ್ತು ಪೂಜೆ, ಚಂಡಿಕಾ ಹೋಮ ಹವನ, ದೇವಿತೆಯರ ಹೊಸ ಮೂರ್ತಿಗಳನ್ನು ಸಂಗೊಳ್ಳಿ ಹಿರೇಮಠದ ಷ. ಬ್ರ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳ ಅಮೃತ ಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. 21 ರಂದು ಲೋಕುರೇಶ್ವರಿ ದೇವತೆಗಳ ಗುಡದೂರ ಗ್ರಾಮಕ್ಕೆ ಆಗಮನ. 22 ರಂದು ಸರ್ವ ಧರ್ಮ ಧಾರ್ಮಿಕ ಸಮ್ಮೇಳನ  ನಡೆಯಲಿದೆ.  

 23 ರಿಂದ 26 ವರೆಗೆ ಸಾರ್ವಜನಿಕರಿಂದ ಗುಡಿ ತುಂಬ ಕಾರ್ಯಕ್ರಮ ನಡೆಯಲಿದೆ. 27 ರಂದು ಗ್ರಾಮದಲ್ಲಿ ಲೋಕೇಶ್ವರಿ ದೇವಿಯ ಹೊನ್ನಾಟ ಹಾಗೂ ಸಂಭ್ರಮಾಚರಣೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಎಲ್ಲಾ ಕಾರ್ಯಕ್ರಮಗಳುಸಂಗೋಳ್ಳಿಯ ಗುರುಲಿಂಗ ಶಿವಾಚಾರ್ಯ ಶ್ರೀಗಳು,  ಕಿತ್ತೂರಿನ ರಾಜ ಯೋಗಿಂದ್ರ ಮಡಿವಾಳ, ದೊಡವಾಡ ಜಡಿಸಿದ್ದೇಶ್ವರ ಶ್ರೀಗಳು,  ನಯಾನಗರದ ಅಭಿನವ ಸಿದ್ದಲಿಂಗ ಶ್ರೀಗಳು, ಬೆಳಗಾವಿಯ ನಿಶ್ಚಲಸ್ವರೂಪ ಶ್ರೀಗಳು ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.  ಸಕಲ ಧಾರ್ಮಿಕ ಪೂಜೆ ವಿಧಿ ವಿಧಾನಗಳು ವೇ. ಮೂ ಶ್ರೀಧರ್‌. ಸಂಗಯ್ಯ. ಹಿರೇಮಠ ಮತ್ತು ಡಾ. ಅರುಣ್ ಶಿವಕುಮಾರ್‌. ಹಿರೇಮಠ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಎಲ್ಲಾ ಪವಿತ್ರ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕೆಂದು ಗುಡದೂರ ಗ್ರಾಮದೇವಿ ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ