ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗೆ ಚಾಲನೆ
Gram Panchayat building work started
ಮಾಂಜರಿ 17: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಮತ್ತು 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿರುಪಾಕ್ಷ ಫೋತದಾರ್ ಇವರು ಇಂದು ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧುರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅನಿತಾ ದಯಾರ್ಕರ್ ವಹಿಸಿದ್ದರು. ಅತಿಥಿಯಾಗಿ ಉಪಾಧ್ಯಕ್ಷರಾದ ಸಂಜಯ್ ನರವಾಡೆ, ಮಾಜಿ ಜಿ ಪ ಸದಸ್ಯ ಹಾಗು ಹಾಲಿ ಗ್ರಾಮ್ ಪಂಚಾಯತ್ ಸದಸ್ಯರಾದ ಪಾಂಡುರಂಗ ಮನೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳಾದ ಮನೋಜ್ ಕಾಂಬಳೆ ಗ್ರಾ ಪ ಸದಸ್ಯ ಶೀತಲ್ ಮಗೆನವರ್ ಶಕೀಲ್ ಮುಲ್ಲಾ ಸುಶಾಂತ ಲಂಬುಗೊಳ್ ಹಾಜರಿದ್ದರು.
ಗ್ರಾಮ ಪಂಚಾಯತ್ ಅಧಿಕಾರಿಗಳಾದ ಶೇಖರ್ ಪಾಟೀಲ್ ಸ್ವಾಗತಿಸಿ ಬಹಳ ದಿನಗಳಿಂದ ಗ್ರಾಮ ಪಂಚಾಯತ್ ಕಟ್ಟಡ ಆಗಬೇಕೆಂಬ ಎಲ್ಲ ಜನರ ಆಸೆಯಿದ್ದು ಅದು ಎಂದು ನನಸಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲಾಗುವುದೆಂದು ಪಾಂಡುರಂಗ ಮಾನ ಹೇಳಿದರು.
ಈ ವೇಳೆ ಗ್ರಾ ಪಂ ಸದಸ್ಯರಾದ ಅಶೋಕ್ ಹವಳೆ, ಚಿದಾನಂದ ಪೂಜಾರಿ, ಶಶಿಕಾಂತ್ ಪಾಟೋಳೆ, ಶೀತಲ್ ಯಾದವ್, ವೈಭವ್ ಇಂಗಳೆ, ಶ್ರೀಶೈಲ ಕೋಟಿವಾಲೆ, ಭವನ ಭೀಲವಡೆ, ಬಾಳಸಾಹೇಬ ಗಾಯಗೋಳ, ಸಾಗರ್ ಯಾದವ್, ಅನಿಲ್ ವಗ್ಗೆ, ಸಂಜಯ್ ನಂದ್ರೆ ಇನ್ನುಳಿದ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 