ಮೂಡಲಗಿ

ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ: ಉದಯಕುಮಾರ ಸಿಂಪಿ ನಾಮಪತ್ರ

ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ: ಉದಯಕುಮಾರ ಸಿಂಪಿ ನಾಮಪತ್ರ

ಮೂಡಲಗಿ 28: ವಿದಾನ ಪರಿಷತ್ತಿನ ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ತಾಲೂಕಿನ ಹಳ್ಳೂರ ಗ್ರಾಮದ ಉದಯಕುಮಾರ ಸಿಂಪಿಯವರು ನಾಮಪತ್ರ ಸಲ್ಲಿಸಿರುವದಾಗಿ ತಿಳಿಸಿದರು. 

ಪಟ್ಟಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಹಾಗೂ ಪದವೀದರರ ಸಮಸ್ಯೆಗಳು ಸಾಕಷ್ಟಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣೀಕ ಪ್ರಯತ್ನ ಪಟ್ಟು ಸೂಕ್ತ ಸ್ಪಂದನೆ ಒದಗಿಸುವಲ್ಲಿ ನಿರಂತರ ಪ್ರಯತ್ನ ಮಾಡುವೆ. ಸಾಕಷ್ಟು ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ನೆರೆಯ ಪ್ರವಾಹ, ಕೋವಿಡ್‌-19 ಹಿನ್ನೆಲೆಯಲ್ಲಿ ದುಡಿಯುವ ಕೈಗಳಗೆ ಕೆಲಸವಿಲ್ಲದಾಗಿದೆ. ಸೇವಾ ಭದ್ರತೆ, ಸರಕಾರದ ನೇಮಕಾತಿಗಳಲ್ಲಿ ವಿಳಂಭ ನೀತಿಯಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಕಾಲೇಜುಗಳಿಗೆ ಬೆಟ್ಟಿ ನೀಡಿ ಮತ ಯಾಚಿಸುವುದಾಗಿ ಹೇಳಿದರು.  

ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷನಾಗಿ, ಸಧ್ಯ ಇಲ್ಲಿನ ಜೆ ಎಮ್ ಎಫ್ ಸಿ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸಿಸುತ್ತಿದ್ದೇನೆ. ಹಿಂದೂಳಿದ ಕುಟುಂಬದ ಹಿನ್ನೆಲೆಯುಳ್ಳವನಾಗಿದ್ದು, ಜನ ಸಾಮಾನ್ಯ ಜನರ ಕಷ್ಟ ಕಾರ​‍್ಪಣಯಗಳ ಬಗ್ಗೆ ಅರಿವು ತಮಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸರ್ವರಿಗೂ ಹಿತ ನೀಡುವ ಆಡಳಿತ ಜಾರಿಯಾಗುವಲ್ಲಿ ಪ್ರಾಮಾಣೀಕವಾಗಿ ಪ್ರಯತ್ನಿಸುವದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 

ಪತ್ರಿಕಾಘೋಷ್ಠಿಯಲ್ಲಿ ಆಯ್ ಎಮ್ ಹಿರೇಮಠ, ಆರ್ ಬಿ ಮಮದಾಪೂರ, ಡಿ ಎಸ್ ರೋಡನ್ನವರ, ಆರ್ ಎಮ್ ಐಹೋಳೆ, ಪಿ ಎಮ್ ಮಾವರಕರ, ಆರ್ ವಿ ಗಾಡದವರ, ಎಮ್ ಪಿ ಅರಸಪ್ಪಗೋಳ, ಶೇಖರ ಗಿಡೋಜಿ ಇದ್ದರು. 


ಸುದ್ದಿ ಓದಿ