ಕೊಲಂಬಿಯಾ : ಕೋವಿಡ್ ಸಂತ್ರಸ್ತರ ನೆನಪಿಗೆ ಅರಣ್ಯ ಬೆಳೆಸಲು ಸರ್ಕಾರದ ಚಿಂತನೆ
ಮೆಕ್ಸಿಕೋ ಸಿಟಿ, ಮಾರ್ಚ್ 19 :(ಸ್ಪುಟ್ನಿಕ್) ಕೋವಿಡ್ 19 ಸಂತ್ರಸ್ತರ ನೆನಪಿಗಾಗಿ ಅರಣ್ಯವನ್ನು ನೆಡಲು ಕೊಲಂಬಿಯಾ ಸರ್ಕಾರ ನಿರ್ಧರಿಸಿದೆ.
ಕುಂಡಿನಮಾರ್ಕಾ ಪ್ರದೇಶದಲ್ಲಿ ಕೋವಿಡ್ ಸಂತ್ರಸ್ತರ ನೆನಪಿಗಾಗಿ ಕೊಲಂಬಿಯಾ 60 ಸಾವಿರ ಮರಗಳ ಅರಣ್ಯವನ್ನು ನೆಡಲಿದೆ ಎಂದು ಪರಿಸರ ಸಚಿವ ಕಾರ್ಲೋಸ್ ಎಡ್ವರ್ಡೊ ಕೊರಿಯಾ ತಿಳಿಸಿದ್ದಾರೆ.
"ಇದು ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸೂಚಿಸುವ ಗೌರವವಾಗಿದೆ, ಮರಗಳನ್ನು ನೆಡುವಿಕೆ ಜೀವನವನ್ನು ತಿಳಿಸುವ ಸಂಕೇತವಾಗಿದೆ. ಇದು ಬಹಳ ಸುಂದರವಾದ ಪುನಃಸ್ಥಾಪನೆ ಯೋಜನೆಯಾಗಿದ್ದು, ವಿಶೇಷವಾಗಿ ನಮ್ಮನ್ನು ತೊರೆದವರ ಸಂಬಂಧಿಕರು ಸೇರಿದಂತೆ ಪ್ರತಿಯೊಬ್ಬರೂ ಅರಣ್ಯಕ್ಕೆ ಭೇಟಿ ನೀಡಬಹುದು, " ಎಂದು ಸಚಿವರು ತಿಳಿಸಿದ್ದಾರೆ.
ಅರಣ್ಯ ಬೆಳೆಸಲು ಒಂದು ಮಿಲಿಯನ್ ಡಾಲರ್ ಗಿಂತ ಹೆಚ್ಚು ವೆಚ್ಚವಾಗಲಿದೆ. ಅರಣ್ಯ ಪುನಃಸ್ಥಾಪನೆಯ ಕಾರ್ಯತಂತ್ರದಲ್ಲಿ ಈ ಯೋಜನೆಯನ್ನು ಸೇರಿಸಲಾಗುವುದು, ಅದರ ಪ್ರಕಾರ ಕೊಲಂಬಿಯಾದ ಅಧಿಕಾರಿಗಳು 2022 ರ ವೇಳೆಗೆ 180 ದಶಲಕ್ಷ ಮರಗಳನ್ನು ನೆಡಲು ಬದ್ಧರಾಗಿದ್ದಾರೆ.
ಕೊಲಂಬಿಯಾದಲ್ಲಿ ಸುಮಾರು 2.31 ಮಿಲಿಯನ್ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, 61,636 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಮತ್ತು ಪ್ರಸ್ತುತ ಸುಮಾರು 33 ಸಾವಿರ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.