ಅಂತರರಾಷ್ಟ್ರೀಯ

ಜಾಗತಿಕ ಕೊವಿಡ್‍ ಪ್ರಕರಣಗಳ ಸಂಖ್ಯೆ 2 ಕೋಟಿ 48 ಲಕ್ಷಕ್ಕೆ ಏರಿಕೆ

ಜಾಗತಿಕ ಕೊವಿಡ್‍ ಪ್ರಕರಣಗಳ ಸಂಖ್ಯೆ 2 ಕೋಟಿ 48 ಲಕ್ಷಕ್ಕೆ ಏರಿಕೆ

ವಾಷಿಂಗ್ಟನ್, ಆಗಸ್ಟ್ 30: ವಿಶ್ವಾದ್ಯಾಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2 ಕೋಟಿ 49 ಲಕ್ಷಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ ಭಾನುವಾರ 8,40,000 ಕ್ಕಿಂತ ಮೀರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.


ಸದ್ಯ, ವಿಶ್ವದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 2,48,91,294ರಷ್ಟಿದ್ದು, ಸಾವಿನ ಸಂಖ್ಯೆ 8,40,892 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ಅಮೆರಿಕದಲ್ಲಿ ಕ್ರಮವಾಗಿ 5,948,426 ಮತ್ತು 182,535 ರಷ್ಟಿದ್ದರೆ, ಬ್ರೆಜಿಲ್ 38,46,153 ಸೋಂಕು ಪ್ರಕರಣಗಳು ಮತ್ತು 1,20,262 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.


ಪ್ರಕರಣಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ (34,63,972). ನಂತರದ ಸ್ಥಾನದಲ್ಲಿ ರಷ್ಯಾ (9,82,573), ಪೆರು (6,29,961), ದಕ್ಷಿಣ ಆಫ್ರಿಕಾ (622,551), ಮೆಕ್ಸಿಕೊ (5,91,712), ಕೊಲಂಬಿಯಾ (5,90,492), ಸ್ಪೇನ್ (4,39,286), ಚಿಲಿ (4,08,009) ), ಅರ್ಜೆಂಟೀನಾ (4,01,239), ಮತ್ತು ಇರಾನ್ (371,816) ಇವೆ.


20,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿರುವ ಇತರ ದೇಶಗಳ ಪೈಕಿ ಮೆಕ್ಸಿಕೊ (63,819), ಭಾರತ (62,550), ಯುಕೆ (41,585), ಇಟಲಿ (35,473), ಫ್ರಾನ್ಸ್ (30,601), ಸ್ಪೇನ್ (29,011), ಮತ್ತು ಪೆರು (28,471) ಸೇರಿವೆ. 

 

ಸುದ್ದಿ ಓದಿ