ರಷ್ಯಾದ ಅಪಾರ್ಟ್ಮೆಂಟ್ ನಲ್ಲಿ ಅನಿಲ ಸ್ಫೋಟ: ಒರ್ವನ ಸಾವು
ಮಾಸ್ಕೋ, ಮಾರ್ಚ್ 30 : ರಷ್ಯಾದ ಟಾಟರ್ಸ್ತಾನ್ ನೆಲೆನೊಡೊಲ್ಸ್ಕ್ ನಗರದ ಅಪಾರ್ಟ್‌ಮೆಂಟ್ ನಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರೆ 7 ಮಂದಿ ಗಾಯಗೊಂಡಿದ್ದಾರೆ ಎಂದು ತುರ್ತು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ, ಪ್ರಾದೇಶಿಕ ತುರ್ತು ಸೇವೆಗಳ ಪ್ರಕಾರ ಅನಿಲ ಸ್ಫೋಟದ ನಂತರ ಲೆನೊಡೊಲ್ಸ್ಕ್‌ನ ಒಂಬತ್ತು ಅಂತಸ್ತಿನ ಕಟ್ಟಡದಲ್ಲಿ ಹಲವು ಅಪಾರ್ಟ್‌ಮೆಂಟ್‌ಗಳು ಕುಸಿದಿವೆ ಎಂದು ಹೇಳಲಾಗಿದೆ.
ಪ್ರಾದೇಶಿಕ ಅನಿಲ ತನಿಖಾಧಿಕಾರಿಗಳ ಪ್ರಕಾರ ಮನೆಯ ಅನಿಲ ಸೋರಿಕೆಯೇ ಸ್ಫೋಟಕ್ಕೆ ಮುಖ್ಯ ಕಾರಣವೆಂದು ಹೇಳಿದ್ದಾರೆ. ಘಟನೆಯ ನಂತರ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾದೇಶಿಕ ಆರೋಗ್ಯ ಸಚಿವಾಲಯದ ವಕ್ತಾರರು ಸ್ಪುಟ್ನಿಕ್ಗೆ ತಿಳಿಸಿದ್ದಾರೆ. ಅನಿಲ ಸ್ಫೋಟಕ್ಕೆ ಆತ್ಮಹತ್ಯಾ ಪ್ರಯತ್ನವೇ ಕಾರಣ ಎನ್ನಲಾಗಿದೆ.