ಗಾಂಧಿ ಸ್ಮೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮ
Gandhi Smriti Special Lecture Program
ತಾಳಿಕೋಟಿ, 17 : "ಈ ಭೂಮಿ ಮನುಷ್ಯನ ಆಸೆಗಳನ್ನು ಪೂರೈಸಬಲ್ಲುದೇ ಹೊರತು ಆತನ ದುರಾಸೆಗಳನ್ನಲ್ಲ" ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹೇಳಿರುವ ಮಾತನ್ನು ಯಾರು ಮರೆಯಬಾರದು, ಹಳ್ಳಿಗಳೇ ಭಾರತದ ಆತ್ಮ ಎಂದು ಬಾಪೂ ಹೇಳಿದ್ದಾರೆ ಆದ್ದರಿಂದ ಗ್ರಾಮೀಣಾಭಿವೃದ್ಧಿ, ಹಳ್ಳಿಗಳ ಸ್ವಚ್ಛತೆಯ ಕಡೆಗೆ ಎಲ್ಲರೂ ಗಮನ ಹರಿಸಬೇಕು ಎಂದು ತಾಳಿಕೋಟೆ ತಹಶೀಲ್ದಾರ ಡಾ. ವಿನಯಾ ಹೂಗಾರ ಹೇಳಿದರು.ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ಬೇನಾಳ ಆರ್.ಎಸ್ - ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಳಿಕೋಟೆ ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಜರುಗಿದ ’ ಗಾಂಧಿ ಸ್ಮೃತಿ ’ ರಸಪ್ರಶ್ನೆ ಸಂವಾದ ಹಾಗೂ ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಳಿಕೋಟೆ ಠಾಣೆಯ ಆರಕ್ಷಕ ಉಪ ನೀರೀಕ್ಷಕಿ ಜ್ಯೋತಿ ಖೋತ್ ಮಾತನಾಡಿ ಮಹಾತ್ಮ ಗಾಂಧೀಜಿಯವರು ನೈತಿಕತೆಯ ಪ್ರತಿರೂಪ, ಅವರ ಬದುಕಿನಲ್ಲಿ ಮಾನವೀಯತೆ ಸರ್ವೋದಯ ತತ್ವಕ್ಕೆ ಆದ್ಯತೆ ನೀಡಿದ್ದರು.ಬಾಪೂಜಿಯ ಸಾತ್ವಿಕ ಬದುಕು ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು.ಉಪನ್ಯಾಸಕ ಸಾಹೇಬಗೌಡ ಮೂಲಿಮನಿ ಮಾತನಾಡಿ ಶ್ರವಣಕುಮಾರನ ಪಿತೃಭಕ್ತಿ, ಸತ್ಯ ಹರಿಶಂದ್ರ ನಾಟಕ ಬಾಲಕ ಮೋಹನ ದಾಸ್ ನ ಮೇಲೆ ಪ್ರಭಾವ ಬೀರಿ ಮುಂದೆ ಮಹಾತ್ಮನಾಗುವಲ್ಲಿ ಮುಖ್ಯ ಪಾತ್ರ ವಹಿಸಿದವು ಎಂದು ಹೇಳಿದರು.
ಸತ್ಯದ ದಾರಿಯಲ್ಲಿ ಸಾಗಿ ಅಹಿಂಸೆ ಎಂಬ ಅಸ್ತ್ರವನ್ನು ಹಿಡಿದು ಭಾರತವನ್ನು ಬ್ರಿಟಿಷ್ ದಾಸ್ಯದಿಂದ ಬಿಡುಗಡೆಗೊಳಿಸಿದ ಮಹಾನ್ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎಂದು ಆರ್.ಎಂ.ಜಿ.ಎಫ್. ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಉಪನ್ಯಾಸದಲ್ಲಿ ಹೇಳಿದರು. ಮಹಾತ್ಮನ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಪ್ರಪಂಚದ ಮಹಾನಾಯಕರಾದ ನೆಲ್ಸನ್ ಮಂಡೇಲಾ, ಡಾ.ಮಾರ್ಟಿನ್ ಲೂಥರ್ ಕಿಂಗ್ ಜ್ಯುನಿಯರ್, ಆಂಗ್ ಸಾನ್ ಸೂಕಿ, ಹೋವೆಲ್ ಅಂತಹ ನಾಯಕರಿಗೆ ಸ್ಪೂರ್ತಿಯಾಗಿ ಇಡೀ ಜಗತ್ತಿಗೆ ಮಾದರಿಯಾಯಿತು. ಅಹಿಂಸೆ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಪಡೆದುಕೊಂಡ ಪ್ರಪಂಚದ ಏಕೈಕ ರಾಷ್ಟ್ರ ನಮ್ಮ ಭಾರತ ಎಂದರು.ಮುಖ್ಯೋಪಾಧ್ಯಾಯರಾದ ಸುಮಂಗಲಾ ಕೋಳೂರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಎಸ್.ಡಿ. ಎಂ.ಸಿ.ಅಧ್ಯಕ್ಷ ಸಾಹೇಬಗೌಡ ಅನಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯ ಮೇಲೆ ಬಸಯ್ಯ ಹಿರೇಮಠ, ಶೇಖರಗೌಡ ರಾರೆಡ್ಡಿ, ಶರಣಗೌಡ ಯಾಳಗಿ, ಪ್ರಭುಗೌಡ ಅನಂತರೆಡ್ಡಿ,ಸಂಗನಗೌಡ ಲಿಂಗಾರೆಡ್ಡಿ, ಗೀರೀಶ ಅನಂತರೆಡ್ಡಿ, ಪ್ರವೀಣ ನಾಡಗೌಡರ, ಶ್ರೀಕಾಂತ ಕೊಡೇಕಲ್, ರತ್ನಾ ಹಂಗರಗಿ, ಇಬ್ರಾಹಿಂ ಮನಗೂಲಿ, ಶಾಂತಗೌಡ ಪಾಟೀಲ್, ಸಂಗನಗೌಡ ಗಬಸಾವ ಳಗಿ, ರಾಜೇಂದ್ರ ಹುನಗುಂದ, ಶಂಕರ ಕುಂಟೋಜಿ, ನೀಲಮ್ಮ ಕೊಡತೆ, ಭಾಗ್ಯವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಐ.ಎಂ.ಚಿಮ್ಮಲಗಿ ಸ್ವಾಗತಿಸಿದರು.ಸುವರ್ಣ ಮಠ ನಿರೂಪಿಸಿದರು. ಪೂಜಾ ಹಜೇರಿ ವಂದಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 