ಅಂತರರಾಷ್ಟ್ರೀಯ

ಭಾರತೀಯರಿಗೆ ಸಿಹಿ ಸುದ್ದಿ : ಗ್ರೀನ್ ಕಾರ್ಡ್ ನಿರ್ಬಂಧ ತೆರವುಗೊಳಿಸಿದ ಬೈಡೆನ್

ಭಾರತೀಯರಿಗೆ ಸಿಹಿ ಸುದ್ದಿ  :  ಗ್ರೀನ್ ಕಾರ್ಡ್  ನಿರ್ಬಂಧ ತೆರವುಗೊಳಿಸಿದ ಬೈಡೆನ್

ವಾಷಿಂಗ್ಟನ್ಫೆ,  26 : ಅಮೆರಿಕಾದಲ್ಲಿ ಕೆಲಸ ಮಾಡಬಯಸುವ ಲಕ್ಷಾಂತರ ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಡಳಿತ ಅನುಕೂಲ ಕಲ್ಪಿಸುವ ಹೊಸ ತೀರ್ಮಾನ  ತೆಗೆದುಕೊಂಡಿದೆ. ವಿದೇಶಿಯರಿಗೆ ಶಾಶ್ವತ ಪೌರತ್ವ ಸೌಲಭ್ಯ  ಕಲ್ಪಿಸುವ ಗ್ರೀನ್ ಕಾರ್ಡ್ ಪಡೆಯಲು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ತಡೆಯನ್ನು ಜೋ ಬೈಡೆನ್ ನ್ ತೆಗೆದು ಹಾಕಿದ್ದಾರೆ. 2020 ರ ಡಿಸೆಂಬರ್ 31ರ ವರೆಗೆ ಹೊಸ ಗ್ರೀನ್ ಕಾರ್ಡ್ ಪಡೆಯಲು ನಿರ್ಬಂಧ ಹೇರಲಾಗಿತ್ತು. ಬಳಿಕ ಅದನ್ನು ಟ್ರಂಪ್ ಇದೆ ಸಾಲಿನ  ಮಾರ್ಚ್ 31 ರವರೆಗೂ  ವಿಸ್ತರಿಸಿದ್ದರು ಬಿಡೆನ್ ಈಗ ಗ್ರೀನ್ ಕಾರ್ಡ್ ಮೇಲಿದ್ದ ನಿರ್ಬಂಧ ತೆಗೆದುಹಾಕಿದ್ದಾರೆ. ಈ ಮೂಲಕ ಲಕ್ಷಾಂತರ ಭಾರತೀಯರಿಗೆ ದೊಡ್ಡ ಪರಿಹಾರ ದೊರಕಿದಂತಾಗಿದೆ. ಹೊಸದಾಗಿ ಗ್ರೀನ್ ಕಾರ್ಡ್ ಪಡೆಯಲು ಇನ್ನು ಮುಂದೆ  ಅರ್ಜಿ ಸಲ್ಲಿಸಲು ಅವಕಾಶ ದೊರಕಲಿದೆ. 



ಸುದ್ದಿ ಓದಿ