ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ 13 ಕೋಟಿ 58 ಲಕ್ಷಕ್ಕೂ ಅಧಿಕ
ವಾಷಿಂಗ್ಟನ್, ಏಪ್ರಿಲ್ 12 :ಜಾಗತಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 13 ಕೋಟಿ 58 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 29 ಲಕ್ಷ 30 ಸಾವಿರಕ್ಕೂ ಅಧಿಕವಾಗಿದೆ ಎಂದು ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಸದ್ಯ, ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಕ್ರಮವಾಗಿ 135,855,351 ಮತ್ತು 2,934,981ರಷ್ಟಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಬಹಿರಂಗಪಡಿಸಿದೆ. ಸಿಎಸ್ಎಸ್ಇ ವರದಿಯಂತೆ ಕೋವಿಡ್ ನಿಂದ ವಿಶ್ವದಲ್ಲೇ ಅತಿ ಹೆಚ್ಚು ಭಾದಿತ ಅಮೆರಿಕದಲ್ಲಿ ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ 3,11,96,121 ಮತ್ತು 5,62,064 ರಷ್ಟಿವೆ.ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 1,34,82,023 ಪ್ರಕರಣಗಳು ಮತ್ತು 3,53,137 ಸಾವುಗಳು ಇದುವರೆಗೆ ವರದಿಯಾಗಿವೆ. 20 ಲಕ್ಷಕ್ಕೂ ಹೆಚ್ಚಿನ ಕರೋನವೈರಸ್ ಪ್ರಕರಣಗಳಿರುವ ದೇಶಗಳ ಪೈಕಿ, ಭಾರತ (1,33,58,805), ಫ್ರಾನ್ಸ್ (51,19,585), ರಷ್ಯಾ (45,89,209), ಯುಕೆ (43,84,610) ಮತ್ತು ಟರ್ಕಿ (38,49,011) ಸೇರಿವೆ ಎಂದು ಸಿಎಸ್‌ಎಸ್‌ಇ ಅಂಕಿ-ಅಂಶಗಳು ತಿಳಿಸಿವೆ. ಸಾವಿನ ವಿಷಯದಲ್ಲಿ, ಮೆಕ್ಸಿಕೊ 2,09,338 ಸಾವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.