ಜಾಗತಿಕವಾಗಿ 10 ಕೋಟಿಗೂ ಹೆಚ್ಚು ಜನರಿಗೆ ಕೊರೋನ ಸೋಂಕು
ಮಾಸ್ಕೋ, ಜನವರಿ 27 : ಕೊರೋನ ನಿವಾರಿಸಲು ಜಗತ್ತಿನ ಅನೇಕ ದೇಶಗಳಲ್ಲಿ ಲಸಿಕೆ ಬಂದು ಜನರಿಗೆ ನೀಡುತ್ತಿದ್ದರೂ ಈವರೆಗೆ ಜಗತ್ತಿನಾದ್ಯಂತ 10 ಕೋಟಿ ಹೆಚ್ಚು ಜನರಿಗೆ ಕೊರೋನ ಸೋಂಕು ತಗಲಿದೆ ಎಂಸದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸ ವರದಿ ಹೇಳಿದೆ. ಸ್ಥಳೀಯ ಅಧಿಕಾರಿಗಳು, ಮಾಧ್ಯಮ ಮತ್ತು ಇತರ ಮೂಲಗಳಿಂದ ದತ್ತಾಂಶವನ್ನು ಪತ್ತೆಹಚ್ಚುವ ವಿಶ್ವವಿದ್ಯಾಲಯದ ವರದಿ ಪ್ರಕಾರ, ವಿಶ್ವದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು 100 ಮಿಲಿಯನ್ ದಾಟಿವೆ. ಇತ್ತೀಚಿನ ನವೀಕರಣ ಮಾಹಿತಿ ಪ್ರಕಾರ, 100,032,461 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು 2 ಕೋಟಿಗೂ ರೋಗಿಗಳು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಮತ್ತು 55 ದಶಲಕ್ಷಕ್ಕೂ ಹೆಚ್ಚು ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.