ಕೋವಿಡ್ : 101.80 ದಶಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
ವಾಷಿಂಗ್ಟನ್, ಜ 29 : ಕೋವಿಡ್-19 ಸೋಂಕಿನಿಂದ ವಿಶ್ವಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 2.198 ದಶಲಕ್ಷ ದಾಟಿದ್ದು, ಪ್ರಕರಣಗಳ ಸಂಖ್ಯೆ 101.8 ದಶಲಕ್ಷ ಮೀರಿದೆ ಎಂದು ಅಮೆರಿಕ ಮೂಲದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವ ಅಗ್ರಗಣ್ಯ ಮತ್ತು ವಿಶ್ವಾಸಾರ್ಹ ಜಾಗತಿಕ ಸಂಸ್ಥೆಯಾಗಿದೆ.
ಸದ್ಯ, ಜಾಗತಿಕವಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆ 101,803,875 ರಷ್ಟಿದ್ದರೆ, ಒಟ್ಟು ಸಾವಿನ ಸಂಖ್ಯೆ 2,198,644 ಕ್ಕೆ ತಲುಪಿದೆ. ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು, ಈ ಪೈಕಿ 434,696 ಸಾವುಗಳು ಸೇರಿದಂತೆ 25,840,365 ಪ್ರಕರಣಗಳಿವೆ. ಅಮೆರಿಕ ನ್ಯಾಷನಲ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆಯ ನಿರ್ದೇಶಕ ಆಂಥೋನಿ ಫೌಸಿ ಹೇಳುವಂತೆ, ಬ್ರಿಟನ್ ನಲ್ಲಿ ಮೊದಲು ಕಾಣಿಸಿಕೊಂಡ ಕರೋನವೈರಸ್ ರೂಪಾಂತರವು ಅಮೆರಿಕದಲ್ಲಿ ಹೆಚ್ಚು ಪ್ರಬಲವಾಗಲಿದೆ ಎಂದು ಎಚ್ಚರಿಸಿದ್ದಾರೆ. ವಸಂತಕಾಲದ ಮಧ್ಯದಲ್ಲಿ ಬ್ರಿಟನ್ ವೈರಸ್ ಅಮೆರಿಕದಲ್ಲಿ ಹೆಚ್ಚು ಹರಡಲಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾಕ್ಕೆ ಭೇಟಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಯ ಅಂತಾರಾಷ್ಟ್ರೀಯ ತಂಡವು ಮೊದಲ ಬಾರಿಗೆ ವುಹಾನ್‌ನಲ್ಲಿ ಚೀನಾದ ವಿಜ್ಞಾನಿಗಳನ್ನು ಭೇಟಿ ಮಾಡಿದೆ.