ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರ
ಮೂಡಲಗಿ : ಸಮಗ್ರ ಶಿಕ್ಷಣ ಯೋಜನೆ ಅಡಿ ಕ್ಷೇತ್ರ ಶಿಕ್ಷಣಾಧಿಕಾರಗಳ ಕಾರ್ಯಾಲಯ ಮತ್ತುಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡಲಗಿ, ಹಾಗೂ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ನಾಗನೂರ ಇವರ ಆಶ್ರಯದಲ್ಲಿ “ಮೂಡಲಗಿ ಶೈಕ್ಷಣಿಕ ವಲಯದ 1 ರಿಂದ 10 ನೇ ತರಗತಿಯ ವರೆಗಿನ ವಿಶೇಷಚೇತನ ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರವನ್ನು ನ,29ರಂದು ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಬಸಗೌಡ ಪಾಟೀಲ ನಾಗನೂರಇವರು ವಹಿಸಿದ್ದು.ಅತಿಥಿಗಳಾಗಿ ಮೂಡಲಗಿ ಸಮೂದಾಯಆರೋಗ್ಯಕೇಂದ್ರದ ವೈಧ್ಯಾದಿಕಾರಿಗಳಾದಡಾ. ಭಾರತಿಕೋಣೆ ಹಾಗೂ ಡಾ. ಖಣದಾಳೆ ಯವರು ಆಗಮಿಸಿದ್ದರು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಸಿ.ಮನ್ನಿಕೇರಿ ಉಪಸ್ಥಿಯಲ್ಲಿ ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎ. ಸಿ ಮನ್ನಿಕೇರಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ವಿಶೇಷ ವಿಕಲಚೇತನ ಮಕ್ಕಳಿಗೆ ಶಾಲಾ ಶಿಕ್ಷಣ ನೀಡುವದರ ಜೊತೆಗೆ ಜೀವನ ಶಿಕ್ಷಣ ನೀಡುತ್ತಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾ ವೈಧ್ಯಕೀಯ ಸೌಲಭ್ಯಗಳನ್ನು ಹಾಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳವಂತೆ ಪಾಲಕರಿಗೆ ಸಲಹೆ ನೀಡಿದರು.
ತಜ್ಞ ವೈಧ್ಯರತಂಡದಲ್ಲಿ ಅಲಿಮಕೋ ದೆಹಲಿ, ಮನೋವಿಕಾಸ ಸಂಸ್ಥೆಯ ಡಾ. ವಿಜಯಕುಮಾರ ಹಿರೇಮಠ ಹಾಗೂ ಇನ್ನೂಳಿದ ವೈಧ್ಯರು ಸೇರಿ ಮೂರುನೂರ (300) ಕ್ಕಿಂತ ಹೆಚ್ಚು ಮಕ್ಕಳ ತಪಾಸಣೆಕೈಗೊಂಡು ವಿವಿಧ ವಿಕಲತೆಗೆಅನಗುಣವಾಗಿ ವಿಶೇಷಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರಅಧಿಕಾರಿಯವರಾದ ಆರ್.ಎಮ್.ಆನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಆಯ್.ಇ.ಆರ್.ಟಿ ಗಳಾದ ವಾಯ್. ಬಿ. ಪಾಟೀಲ, ಎಮ್. ಎ. ಹೊಸಮನಿ, ಜಗದೀಶ. ಖಾಕಂಡಕಿ, ಎಸ್. ಜಿ. ಮಾನೆಯವರುಕಾರ್ಯಕ್ರವನ್ನು ವ್ಯವಸ್ಥಿತವಾಗಿ ಸಂಘಟಿಸಿದರು.
ಎಸ್.ವ್ಹಿ. ಕುನ್ನೂರೆ, ಜಿ.ಆರ್. ಪತ್ತಾರ, ಎಸ್. ವಾಯ್ ಮೂಡಲಗಿ, ಆಯ್.ಎಸ್. ಬಡಿಗೇರಇವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಹಕರಿದರು. ಹಾಗೂ ಎಸ್.ವ್ಹಿ. ಕೇದಾರಿಇವರುಕಾರ್ಯಕ್ರಮವನ್ನು ನಿರೂಪಿಸಿ ವಂದನಾರೆ್ಣ ಗೈದರು.