ಉಚಿತ ಹೃದಯ ತಪಾಸಣೆ ಶಿಬಿರ
ಬ್ಯಾಡಗಿ:ಪ್ರಜ್ಞಾವಂತರು ಹೆಚ್ಚಾಗಿರುವ ಕಾಲಘಟ್ಟದಲ್ಲಿಯೇ ಬಹುತೇಕ ಕುಟುಂಬಗಳು ಆರೋಗ್ಯ ಭದ್ರತೆ ಕಳೆದುಕೊಳ್ಳುತ್ತಿರು ವುದು ದುರಂತದ ಸಂಗತಿ ಇದರಿಂದ ಆರೋಗ್ಯವಂತ ಸಮಾಜ ಕ್ರಮೇಣವಾಗಿ ಮಾಯವಾಗುತ್ತಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಎಸ್.ಎಸ್.ನಾರಾಯಣ ಹಾರ್ಟ ಸೆಂಟರ್, ರೋಟರಿ ಕ್ಲಬ್, ಮೆಣಸಿನಕಾಯಿ ವರ್ತಕರ ಸಂಘ ಹಾಗೂ ಸೇಂಟ್ ಜಾನ್ ಅಂಬುಲೆನ್ಸ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹೃದಯ ತಪಾಸಣಾ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಗಳು ಬಡವ ಶ್ರೀಮಂತರೆನ್ನದೇ ಏರಗುತ್ತಿವೆ ಜೀವನ ಸುಲಭ ಎನ್ನುವ ಮಾತುಗಳಲ್ಲಿ ಉಳಿದಿಲ್ಲ, ಒತ್ತಡದ ಕೆಲಸಗಳಿಂದಾಗಿ ಜೀವನ ಶೈಲಿಯಲ್ಲಿ ಏರು ಪೇರಾಗಿ ಹಣವಂತರೂ ಸಹ ದೀರ್ಘಕಾಲದ ರೋಗದಿಂದ ನರಳುತ್ತಿದ್ದಾರೆ, ಕನಿಷ್ಟ ಪಕ್ಷ ಉಚಿತ ಆರೋಗ್ಯ ಶಿಬಿರಗಳಲ್ಲಿ ಜನರು ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯದ ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ರೋಗ ತಗುಲಿದ ಬಳಿಕ ವೈದ್ಯಕೀಯ ಸೇವೆಗೆ ಮೊರೆ ಹೋಗುವುದು ಬುದ್ಧಿವಂತರ ಲಕ್ಷಣವಲ್ಲ, ರೋಗ ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳುವುದು ಸೂಕ್ತ, ಮನುಷ್ಯ ಈಗಾಗಲೇ ತನ್ನ ಸ್ವಾರ್ಥಕ್ಕಾಗಿ ಶುದ್ಧ ಕುಡಿಯುವ ನೀರು ಗಾಳಿ ಇನ್ನಿತರ ವಸ್ತುಗಳನ್ನು ನಾಶಪಡಿಸುತ್ತಿದ್ದಾನೆ.
ಮುಂದಿನ ಪೀಳಿಗೆಯಲ್ಲಿ ಮಕ್ಕಳು ಹುಟ್ಟುವಾಗಲೇ ಒಂದೊಂದು ರೋಗದಿಂದ ಬಳಲುವಂತಹ ಸ್ಥಿತಿ ನಿಮರ್ಾಣವಾಗಿದೆ ಎಂದರು.
ದಾವಣಗೆರೆ ಎಸ್.ಎಸ್.ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಗುರುರಾಜ ಮಾತನಾಡಿ, ಇತ್ತೀಚೆಗೆ ಕೇವಲ 40 ವರ್ಷ ಪೂರೈಸಿದ ವರಲ್ಲಿಯೂ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತಿವೆ, ಇದೊಂದು ಅಪಾಯಕಾರಿ ಸೂಚನೆ ಯಾಗಿದ್ದು ಜೀವನದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ, ನಿತ್ಯ ವ್ಯಾಯಾಮ ವಾಯುವಿಹಾರದಿಂದ ದೂರವಿರುವುದು, ಅತಿಯಾದ ಧೂಮಪಾನ ಸೇರಿದಂತೆ ಇನ್ನಿತರ ಕಾರಣಗಳಾಗಿವೆ ಎಂದರು.
ಹೃದಯ ರೋಗ ಬಂದ ಕೂಡಲೇ ಸೂಕ್ತ ಚಿಕಿತ್ಸೆ ಅಗತ್ಯವಿದೆ, ರಕ್ತನಾಳಗಳ ಸಂಚಾರಕ್ಕೆ ತೊಂದರೆಯಾದರೆ ಹೃದಯಕ್ಕೆ ಅಪಾಯ ಬರುತ್ತದೆ.
ಹೀಗಾದಾಗ ಆದಷ್ಟು ಬೇಗ ವೈದ್ಯರನ್ನು ಕಾಣಬೇಕು. ಹೃದಯಾಘಾತ ವಾದಾಗ ಮೊದಲ 4 ತಾಸುಗಳು ಅಮೂಲ್ಯವಾದ ವೇಳೆಯಾಗಿದ್ದು ನಿರ್ಲಕ್ಯ ತೋರಿದರೇ ಜೀವಕ್ಕೆ ಅಪಾಯವಿದೆ, ಶೇ.65 ರಷ್ಟು ಹೃದಯಕ್ಕೆ ರಕ್ತ ಸರಬರಾಜು ಆಗುತ್ತಿದ್ದರೆ ಅಪಾಯವಿಲ್ಲ ಎಂದರು.
ರೋಟರಿಕ್ಲಬ್ ಅಧ್ಯಕ್ಷ ಎಸ್.ಎಸ್.ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಕಾರ್ಯದಶರ್ಿ ಮಂಜುನಾಥ ಉಪ್ಪಾರ, ಸೇಂಟ್ ಜಾನ್ ಅಂಬ್ಯಲೆನ್ಸ ಕಾರ್ಯದಶರ್ಿ ಡಾ.ಎಸ್.ಎನ್.ನಿಡಗುಂದಿ, ವರ್ತಕರ ಸಂಘದ ಗೌರವ ಕಾರ್ಯದಶರ್ಿ ರಾಜು ಮೋರಗೇರಿ, ಎಸ್.ಎಸ್.ನಾರಾಯಣ ಹಾರ್ಟ ಸೆಂಟರ್ ಸಿಬ್ಬಂದಿ ಮಂಜಣ್ಣ, ಪವಿತ್ರಾ, ಮಂಜುನಾಥ, ಸುಮಿತ್ರಾ, ಸ್ಥಳೀಯ ರೋಟರಿ ಕ್ಲಬ್ನ ಪಿ.ಎಲ್.ಮೇಲಗಿರಿ. ಎಚ್.ಬಿ.ಲಿಂಗಯ್ಯ, ಜೆ.ಎಚ್.ಪಾಟೀಲ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಅರಳಿಮಟ್ಟಿ, ಮಹೇಶ್ವರಿ ಪಸಾರದ, ಬಸವರಾಜ ಸುಂಕಾಪೂರ, ಮಾಲತೇಶ ಉಪ್ಪಾರ, ಕರಬಸಪ್ಪ ಯಾದ್ವಾಡ ಸದಸ್ಯರಾದ ಸಂದ್ಯಾರಾಣಿ ದೇಶಪಾಂಡೆ ಎಂ.ಸಿ.ಯರಗಲ್ ಇನ್ನಿತರರು ಉಪಸ್ಥಿತರಿದ್ದರು. ಡಾ.ಎ.ಎಂ.ಸೌದಾಗರ ಸ್ವಾಗತಿಸಿ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 