ಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಪೋಟ ನಾಲ್ವರು ಸಾವು
ಇಸ್ಲಾಮಾಬಾದ್, ಏ 22: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದ ಐಷಾರಾಮಿ ಹೋಟೆಲ್ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಬಾಂಬ್ ಸ್ಪೋಟದ ಕೃತ್ಯದ ಹೊಣೆ ತನ್ನದು ಎಂದು ಪಾಕಿಸ್ತಾನ ತಾಲಿಬಾನಿ ಹೇಳಿಕೊಂಡಿದೆ.
ಪಾಕಿಸ್ತಾನದಲ್ಲಿರುವ ಚೈನಾ ರಾಯಬಾರಿ ದಾಳಿಯ ಗುರಿಯಾಗಿದ್ದರು ಎಂದು ಶಂಕಿಸಲಾಗಿದೆ.
ವಿದೇಶಿ ಅತಿಥಿಗಳು ಹಾಗೂ ಪಾಕಿಸ್ತಾನ ಉನ್ನತ ಸರ್ಕಾರಿ ಅಧಿಕಾರಿಗಳ ವಸತಿಗೆ ಹೋಟೆಲ್ ಹೆಸರುವಾಸಿಯಾಗಿದೆ.
ಸ್ಫೋಟಕ ತುಂಬಿದ ಕಾರು ಹೋಟೆಲ್ ಬಳಿ ಸ್ಫೋಟಗೊಂಡಿದೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
ಚೀನಾದ ರಾಯಭಾರಿ ನಾಂಗ್ ರೊಂಗ್ ಆ ಸಮಯದಲ್ಲಿ ಅನ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕಾರಣ ಹೋಟೆಲ್‌ನಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಲೂಚಿಸ್ತಾನ್ ಪ್ರತ್ಯೇಕತಾವಾದಿಗಳ ದಂಗೆಯ ತಾಣವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ಬುಡಕಟ್ಟು ಪ್ರದೇಶಗಳಲ್ಲಿ ಪಾಕಿಸ್ತಾನಿ ತಾಲಿಬಾನ್ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ.