ಸುಡಾನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸ್ಫೋಟ, 4 ಮಂದಿ ಸಾವು
ಮಾಸ್ಕೋ, ಜುಲೈ 11: ಪೂರ್ವ ಸುಡಾನ್‌ನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಕನಿಷ್ಠ 4 ಜನರು ಮೃತಪಟ್ಟಿದ್ದಾರೆ ಎಂದು ಸುಡಾನ್ ವೈದ್ಯರ ಕೇಂದ್ರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್-ಅಮೀರ್ ಕ್ಲಬ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಇದರಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಸಮಿತಿಯನ್ನು ಉಲ್ಲೇಖಿಸಿ ಭಾನುವಾರ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಕ್ರೀಡಾ ಕ್ಲಬ್‌ನಲ್ಲಿ ಗುಂಡು ಹಾರಿಸಿ ಅಥವಾ ಇರಿತಕ್ಕೊಳಗಾದ ಇತತೆ ಮೂವರುಗಾಯಗೊಂಡಿದ್ದಾರೆ. ಶನಿವಾರದ ಮಾರಣಾಂತಿಕ ಘಟನೆಗೆ ಬುಡಕಟ್ಟು ಕಲಹವೇ ಕಾರಣವಾಗಿದೆ ಎಂದೂ ವೈದ್ಯರ ಸಮಿತಿ ಆರೋಪಿಸಿದೆ.