ಈಜಿಪ್ಟ್ ನಲ್ಲಿ 157 ಹೊಸ ಕರೋನ ಸೋಂಕು ಪ್ರಕರಣ ದಾಖಲು
ಕೈರೋ, ಸೆಪ್ಟೆಂಬರ್ 5: ಈಜಿಪ್ಟ್ ನಲ್ಲಿ ಶುಕ್ರವಾರ ಹೊಸದಾಗಿ 157 ಹೊಸ ಕರೊನ ಸೋಂಕು ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 99,582 ಕ್ಕೆ ತಲುಪಿಸಿದೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕರೋನಸೋಂಕಿನಿಂದ 16 ರೋಗಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 5,495 ಕ್ಕೆ ಏರಿಕೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶುಕ್ರವಾರ 890 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿ ಒಠ್ಠು ಗುಣಮಖರಾದವರ ಸಂಖ್ಯೆ 76,305 ಕ್ಕೆ ಏರಿಕೆಯಾಗಿದೆ. ಫೆಬ್ರವರಿ 14 ರಂದು ಈಜಿಪ್ಟ್ ತನ್ನ ಮೊದಲ ದೃ ಡಪಡಿಸಿದ ಪ್ರಕರಣವನ್ನು ಮತ್ತು ಮಾರ್ಚ್ 8 ರಂದು ಮೊದಲ ಸಾವಿನ ಪ್ರಕರಣ ಘೋಷಿಸಲಾಗಿತ್ತು .