ಅಂತರರಾಷ್ಟ್ರೀಯ

ಅಮೆರಿಕ ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್ಫೆಲ್ಡ್ ನಿಧನ

ಅಮೆರಿಕ  ಮಾಜಿ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್ ರಮ್ಸ್ಫೆಲ್ಡ್ ನಿಧನ

ವಾಷಿಂಗ್ಟನ್, ಜುಲೈ 1 :ಎರಡು  ಭಾರಿ ಅಮೆರಿಕದ  ರಕ್ಷಣಾ ಕಾರ್ಯದರ್ಶಿಯಾಗಿದ್ದ  ಡೊನಾಲ್ಡ್ ರಮ್ಸ್ಫೆಲ್ಡ್, ಅವರು  ತಮ್ಮ 88 ನೇ ವಯಸ್ಸಿನಲ್ಲಿ ರಕ್ತ ಕ್ಯಾನ್ಸರ್ ನಿಂದ  ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ . 

2003 ರ ಇರಾಕ್ ಆಕ್ರಮಣದ ಪ್ರಮುಖ ರೂವಾರಿಯಾಗಿದ್ದರು ಅಮೆರಿಕದ ರಾಜಕಾರಣಿರಕ್ತ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ  ಎಂದು ವರದಿಯಾಗಿದೆ.  1975 ರಿಂದ 1977 ರವರೆಗೆ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ನೇತೃತ್ವದಲ್ಲಿ ರಮ್ಸ್ಫೆಲ್ಡ್ ಎರಡು ಬಾರಿ ರಕ್ಷಣಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 

ಕೆಲ ಕಾಲ  ಅವರು ಶ್ವೇತಭವನದ ಮುಖ್ಯಸ್ಥರಾಗಿದ್ದರು ಮತ್ತು 2001 ರಿಂದ 2006 ರವರೆಗೆ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರ ಜೊತೆಗೂ ಸಹ ಸೇವೆ ಸಲ್ಲಿಸಿದ್ದರು . ಅವರು ಇರಾಕ್ ಮತ್ತು ಅಫ್ಘಾನಿಸ್ತಾನದ ಮೇಲೆ ಅಮೆರಿಕ  ಆಕ್ರಮಣಗಳ ಹಿಂದಿನ  ಪ್ರೇರಕ ಶಕ್ತಿಯಾಗಿದ್ದರು ಆದರೂ  ಒಸಾಮಾ ಬಿನ್ ಲಾಡೆನ್ ಅವರನ್ನು ಸೆರೆಹಿಡಿಯಲು,  ಅಥವಾ ಕೊಲ್ಲಲು ಅಧಿಕಾರದಲ್ಲಿದ್ದ ಐದು ವರ್ಷಗಳ ಅವಧಿಯಲ್ಲಿ ಅವರ ಯತ್ನ ವಿಫಲವಾಗಿತ್ತು. 

ವಿಶೇಷವಾಗಿ ಇರಾಕ್ ಮತ್ತು ಅಫ್ಘಾನಿಸ್ತಾನ ಕ್ರಮ ಕುರಿತು ಕೈಗೊಂಡ ನಿಲುವುಗಳಿಗೆ ಅವರು  ತೀವ್ರ ಟೀಕೆಗೂ  ಗುರಿಯಾಗಿದ್ದರು.

ಪ್ರಸ್ತುತ ಪೆಂಟಗನ್ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ,  ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ರಮ್ಸ್‌ಫೆಲ್ಡ್ 1954 ರಿಂದ 1957 ರವರೆಗೂ  ಅಮೆರಿಕ  ನೌಕಾಪಡೆಯ ಪೈಲಟ್ ಮತ್ತು ಫ್ಲೈಟ್ ಬೋಧಕರಾಗಿ ಸೇವೆ ಸಲ್ಲಿಸಿದ್ದರು ಎಂದೂ ಆಸ್ಟಿನ್ ಹೇಳಿದ್ದಾರೆ. 

ಸುದ್ದಿ ಓದಿ