ಬಲೆಗೆ ಬಿದ್ದ ಜಿಂಕೆ ಅರಣ್ಯ ಸಿಬ್ಬಂದಿ ರಕ್ಷಣೆ
ಮುಂಡಗೋಡ 04: ತಾಲೂಕಿನ ಸನವಳ್ಳಿ ಬಳಿಯ ಬಪ್ಪನ ಕಟ್ಟಿಯಲ್ಲಿನ ಹೊಲದ ಬಲೆಯ ಬೇಲಿಗೆ ಜಿಂಕೆಯೊಂದು ಸಿಲುಕಿಸಿಕೊಂಡು ಪ್ರಾಣಭಯದಿಂದ ಒದ್ದಾಡುತ್ತಿದ್ದಾಗ ಗ್ರಾಮಸ್ಥರ ಸಹಾಯದಿಂದ ಬಲೆಗೆ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಬಸವರಾಜ ಶೇರವಾಡ ಎಂಬುವರು ಬೆಳೆ ರಕ್ಷಣೆಗೆ ತಮ್ಮ ಗದ್ದೆಯ ಸುತ್ತಲೂ ಬಲೆಯ ಬೇಲಿ ಹಾಕಿದ್ದಾರೆ. ಆಕಸ್ಮಿಕವಾಗಿ ಜಿಂಕೆಯೊಂದು ಆಹಾರ ಹುಡುಕುತ್ತಾ ಬಂದ ವೇಳೆಗೆ ಜಿಂಕೆಯ ಕೋಡು ಬೇಲಿಯ ಬಲಿಗೆ ಸಿಲುಕಿಕೊಂಡಿತ್ತು. ತಕ್ಷಣವೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ರಾಜು ಪರೇಟ್ ಮತ್ತು ಕೃಷ್ಣಾ ಬಲೆಯಿಂದ ರಕ್ಷಿಸಿ ಸುರಕ್ಷಿತವಾಗಿ, ಕಾಡಿಗೆ ಬಿಟ್ಟಿದ್ದಾರೆ.ಸ್ಥಳೀಯರಾದ ರಾಜು ಗುಬ್ಬಕ್ಕನವರ ರಾಘು ಕೋಣನಕೇರಿ ಹಾಗೂ ಉಪಸ್ಥಿತರಿದ್ದರು.