ಕನ್ನಡ ಸಾಹಿತ್ಯಕ್ಕೆ ಹೊಸ ಶಕ್ತಿ ತುಂಬಿದ ಸಾಹಿತ್ಯವೇ ಜನಪದ ಸಾಹಿತ್ಯ: ಟಿ. ಎಸ್. ವಂಟಗೂಡಿ
Folk literature is the literature that has given new energy to Kannada literature: T. S. Vantagudi
ಪಾಲಬಾವಿ 23 : ಭಾರತ ದೇಶ ಹಳ್ಳಿಗಳಿಂದ ಕೂಡಿದ ಶ್ರೀಮಂತ ದೇಶ ಹಲವಾರು ಸಾಂಸ್ಕೃತಿಕ ಹಳ್ಳಿ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ನಡೆ ನುಡಿ ಉಡುಗೆ, ತೊಡುಗೆ ಆಚಾರ, ವಿಚಾರ ತುಂಬಾ ಶ್ರೀಮಂತವಾಗಿವೆ. ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಲಾರದೆ, ಬರೆಯಲಾರದೆ, ಓದಲಾರದೆ ಜನಪದ ಸಾಹಿತ್ಯವನ್ನು ಕಟ್ಟಿಕೊಟ್ಟವರು ಹಳ್ಳಿಗರು. ಕುಟ್ಟುವಾಗ, ಬೀಸುವಾಗ, ಹಂತಿ ಹೊಡೆಯುವಾಗ, ರೆಂಟೆ ಕುಂಟೆ ಹೊಡೆಯುವಾಗ, ಆಸರಿಕೆ ಬೇಸರಿಕೆ ನೋವು, ನಲಿವು, ದುಃಖ ದುಮ್ಮಾನವಾದಾಗ ಸಹಜವಾಗಿ ಹಳ್ಳಿಯ ಜನರ ಬಾಯಿಂದ ಬಂದ ಹಾಡುಗಳೇ ಜನಪದ ಹಾಡುಗಳಾಗಿವೆ. ಜನಪದರು ಪಟ್ಟಪಾಡೆಲ್ಲವೂ ಹಾಡಾಗಿ ಹೊರ ಹೊಮ್ಮಿದೆ.
ಮಣ್ಣಿನಲ್ಲಿ ಬೆವರು ಕಲಿಸಿ ಪ್ರಕೃತಿಯೊಂದಿಗೆ ದುಡಿಯುವ ಮಣ್ಣಿನ ಮಕ್ಕಳ ಸಮುದಾಯವೇ ಜನಪದ. ಜನಪದವೆಂಬುದು ವಿದ್ವಾಂಸರ ಪೆನ್ನಿನಿಂದ ಬಂದ ಸಾಹಿತ್ಯವಲ್ಲ ಮಣ್ಣಿನಲ್ಲಿ ಬೆವರು ಕಲಿಸಿ ದುಡಿಯುವ ಮಣ್ಣಿನ ಮಕ್ಕಳ ಬೆವರಿನ ಸಾಹಿತ್ಯವೇ ಜನಪದ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ಕವಿವಾಣಿಯಂತೆ ವರಕವಿ ದರಾ ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಜನಪದ ಸಾಹಿತ್ಯವನ್ನು ಬೆರೆಸಿ ಸುಂದರ ಸಾಹಿತ್ಯವನ್ನು ಕಟ್ಟಿಕೊಟ್ಟವರು ಕನ್ನಡ ಸಾಹಿತ್ಯದ ತಾಯಿ ಬೇರು ಜನಪದ, ಕನ್ನಡ ಸಾಹಿತ್ಯಕ್ಕೆ ಹೊಸ ಶಕ್ತಿ ತುಂಬಿದ ಸಾಹಿತ್ಯವೇ ಜನಪದ ಸಾಹಿತ್ಯವು 10ನೇ ಶತಮಾನದ ಪಂಪನ ಕಾವ್ಯವೆಂದರೆ ಕಬ್ಬು ಸವಿದಂತೆ, ಕುಮಾರವ್ಯಾಸನ ಕಾವ್ಯವೆಂದರೆ ಸುಲಿದ ಬಾಳೆಹಣ್ಣು ಇದ್ದಂತೆ, ಬಸವಣ್ಣನವರ ವಚನಗಳು ಎಂದರೆ ದ್ರಾಕ್ಷಿ ಹಣ್ಣುಗಳನ್ನು ಸವಿದಂತೆ ಜನಪದ ಸಾಹಿತ್ಯವೆಂದರೆ ಸವಿಯಾದ ಜೇನುತುಪ್ಪ ಸವಿದಂತೆ ಎಂದು ಹಾರೂಗೇರಿಯ ಸಿದ್ದೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಹಾಗೂ ಜನಪದ ಸಾಹಿತಿಗಳಾದ ಟಿ.ಎಸ್. ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.
ಅವರು ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ, ವಸಂತರಾವ ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಿಡಕಲ್ಲ ಇವರ ಆಶ್ರಯದಲ್ಲಿ ಗುರುವಾರ ದಿ.23ರಂದು ಮುಂಜಾನೆ 10ಗಂಟೆಗೆ ವಸಂತರಾವ್ ಪಾಟೀಲ ಮಹಾವಿದ್ಯಾಲಯದ ಆವರಣದಲ್ಲಿ "ಹಳ್ಳಿ ಹಬ್ಬದ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು. ವಸಂತರಾವ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಕರಿಗಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.ವೇದಿಕೆಯ ಮೇಲೆ ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಚಾರ್ಯ ಆರ್.ಎಸ್ ತಳವಾರ, ಸಿಬ್ಬಂದಿಗಳಾದ ಎಸ್.ವಿ.ವಗ್ಗಾ, ಮಾಯಪ್ಪ ಶಿರಡೋಣಿ, ಮಂಜುನಾಥ ಢವಳೇಶ್ವರ, ದೈಹಿಕ ಉಪನ್ಯಾಸಕ ಲೋಕೇಶ ಪಾಟೀಲ, ಪ್ರೀತಮ ನಾಗನೂರ, ಎಸ್.ಕೆ.ಹಿಪ್ಪರಗಿ, ಗೀರೀಶ ಸೂರಣ್ಣವರ,
ಜಿ.ಎನ್.ಜಮಖಂಡಿ, ಎಂ.ಜಿ. ಯರಡೆತ್ತಿ, ಸುಲೋಚನಾ ಹುಕ್ಕೇರಿ, ಸಂಜೀವ ಇಮ್ಮಡಿ, ಶಿವಾನಂದ ಪಾರ್ಥನಳ್ಳಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕುಮಾರಿ ಚೈತ್ರಾ ಹೊಸಟ್ಟಿ ಸ್ವಾಗತಿಸಿದರು. ಕುಮಾರಿ ಸುಪ್ರೀತಾ ಬಿದರಿ ನಿರೂಪಿಸಿದರು. ಸರಸ್ವತಿ ಸಣ್ಣಕ್ಕಿನವರ ವಂದಿಸಿದರು.ಫೋಟೋ ಶೀರ್ಷಿಕೆ:- ವಸಂತರಾವ ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಿಡಕಲ್ಲ ಇವರ ಆಶ್ರಯದಲ್ಲಿ ಗುರುವಾರ ದಿ.23ರಂದು ವಸಂತರಾವ್ ಪಾಟೀಲ ಮಹಾವಿದ್ಯಾಲಯದ ಆವರಣದಲ್ಲಿ "ಹಳ್ಳಿ ಹಬ್ಬದ" ಕಾರ್ಯಕ್ರಮದಲ್ಲಿ ಸಾಹಿತಿ ಟಿ.ಎಸ್.ವಂಟಗೂಡಿ ಅತಿಥಿ ಉಪನ್ಯಾಸ ನೀಡುತ್ತಿರುವುದು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 