ಅಂತರರಾಷ್ಟ್ರೀಯ

ಪಶ್ಚಿಮ ಜರ್ಮನಿಯಲ್ಲಿ ಪ್ರವಾಹ: ಸಾವಿನ ಸಂಖ್ಯೆ 133ಕ್ಕೆ ಏರಿಕೆ

ಪಶ್ಚಿಮ ಜರ್ಮನಿಯಲ್ಲಿ ಪ್ರವಾಹ: ಸಾವಿನ ಸಂಖ್ಯೆ 133ಕ್ಕೆ ಏರಿಕೆ

  ಬರ್ಲಿನ್‍, ಜುಲೈ 17 : - ಜರ್ಮನಿಯ ಪಶ್ಚಿಮ ರಾಜ್ಯಗಳಲ್ಲಿ ಪ್ರವಾಹಗಳಿಂದ ಸಾವನ್ನಪ್ಪಿದವರ ಸಂಖ್ಯೆ 133ಕ್ಕೆ ಏರಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಬಿಲ್ಡ್‍ ಪತ್ರಿಕೆ ವರದಿ ಮಾಡಿದೆ. 

  ಪ್ರತಿಕೂಲ ಹವಾಮಾನದಿಂದ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ಈ ಹಿಂದೆ ವರದಿಗಳು ತಿಳಿಸಿದ್ದವು. 

 ನಾರ್ಥ್‍ ರೀನ್‍— ವೆಸ್ಟ್ ಫಲಿಯಾದಲ್ಲಿ 43, ರಿನ್‍ ಲ್ಯಾಂಡ್‍—ಪ್ಯಾಲಟಿನೇಟ್‍ ರಾಜ್ಯದಲ್ಲಿ 90 ಮಂದಿ ಸಾವನ್ನಪ್ಪಿರುವುದಾಗಿ ಪತ್ರಿಕೆ ತಿಳಿಸಿದೆ. 

 ಈ ವಾರ ಪಶ್ಚಿಮ ಯೂರೋಪ್‍ ನಲ್ಲಿ ಭಾರಿ ಮಳೆ ಮತ್ತು ಭೀಕರ ಪ್ರವಾಹಗಳು ಎದುರಾಗಿವೆ. ಪ್ರತಿಕೂಲ ಹವಾಮಾನವು ಸಾವು-ನೋವಿಗೆ ಕಾರಣವಾಗಿರುವುದು ಮಾತ್ರವಲ್ಲದೆ, ಅನೇಕ ಕಟ್ಟಡಗಳು ಮತ್ತು ಇತರ ಮೂಲ ಸೌಕರ್ಯಗಳನ್ನು ತೀವ್ರವಾಗಿ ಹಾನಿಗೊಳಿಸಿದೆ. 

 ಸೋಮವಾರ ಬರ್ನಡ್ ಚಂಡಮಾರುತದಿಂದ ಜರ್ಮನಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. 

  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. 

ಸುದ್ದಿ ಓದಿ