ಅಂತರರಾಷ್ಟ್ರೀಯ

ಕೊಲಂಬಿಯಾದಲ್ಲಿ ಹೆಲಿಕಾಪ್ಟರ್ ಪತನ: ಕನಿಷ್ಠ ಐವರು ಪೊಲೀಸರು ಸಾವು

ಕೊಲಂಬಿಯಾದಲ್ಲಿ ಹೆಲಿಕಾಪ್ಟರ್ ಪತನ: ಕನಿಷ್ಠ ಐವರು ಪೊಲೀಸರು ಸಾವು

ಬೊಗೋಟಾ, ಮೇ 31: ಕೊಲಂಬಿಯಾದ ಬೊಲಿವಾರ್ ಇಲಾಖೆಯ ಗ್ರಾಮೀಣ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಕನಿಷ್ಠ ಐವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಇವಾನ್ ಡುಕ್ ಹೇಳಿದ್ದಾರೆ.

‘ಕೊಲಂಬಿಯಾ ಪೊಲೀಸ್ ನ ಮಾದಕ ದ್ರವ್ಯ ನಿಗ್ರಹ ವಿಭಾಗಕ್ಕೆ ನಿಯೋಜಿಸಲಾಗಿದ್ದ ಐವರು ಸಿಬ್ಬಂದಿ ಮೃತಪಟ್ಟಿರುವುದು ತೀವ್ರ ದುಃಖ ತಂದಿದೆ. ಬೊಲಿವಾರ್ ದಕ್ಷಿಣದ ಕ್ಯಾಂಟಗಲ್ಲೋ ಪಟ್ಟಣದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ದುರಂತ ಕುರಿತು ತನಿಖೆಗೆ ಆದೇಶಿಸಲಾಗಿದೆ.’ ಎಂದು ಅಧ್ಯಕ್ಷರು ಟ್ವೀಟ್‍ ಮಾಡಿದ್ದಾರೆ. 

‘ಅಪಘಾತ ಸಂಭವಿಸಿದ ಪ್ರದೇಶವಾದ ಬೊಲಿವಾರ್ ದಕ್ಷಿಣದ ಕ್ಯಾಂಟಾಗಲ್ಲೊ ಕ್ಕೆ ಪೊಲೀಸರು ಮತ್ತು ಸೇನಾ ಪಡೆಗಳು ರಕ್ಷಣೆಗೆ ಧಾವಿಸಿದ್ದಾರೆ.’ ಎಂದು ಅವರು ಹೇಳಿದ್ದಾರೆ. 

  

ಸುದ್ದಿ ಓದಿ