ಅಂತರರಾಷ್ಟ್ರೀಯ

ಫೋರ್ಬ್ಸ್ ಪಟ್ಟಿಯಲ್ಲಿ ಐವರು ಭಾರತೀಯ ಮಹಿಳೆಯರು

ಫೋರ್ಬ್ಸ್ ಪಟ್ಟಿಯಲ್ಲಿ  ಐವರು  ಭಾರತೀಯ ಮಹಿಳೆಯರು

ನ್ಯೂಯಾರ್ಕ್, ಆಗಸ್ಟ್‌  12  ಭಾರತೀಯ  ಮೂಲದ   ಐವರು  ಮಹಿಳೆಯರಿಗೆ   ಅಪರೂಪದ ಗೌರವ  ಲಭಿಸಿದೆ.   ಅಮೆರಿಕಾದ    ರಿಚ್ಚೆಸ್ಟ್‌   ಸೆಲ್ಫ್‌  ಮೇಡ್‌  ವುಮೆನ್‌   ಶೀರ್ಷಿಕೆಯಡಿ     ಹೊಸದಾಗಿ   ಬಿಡುಗಡೆಗೊಳಿಸಿರುವ     ಫೋರ್ಬ್ಸ್  ಪಟ್ಟಿಯಲ್ಲಿ    ಐವರು ಭಾರತೀಯ   ಅಮೆರಿಕನ್‌  ಮಹಿಳೆಯರು  ಸ್ಥಾನಪಡೆದುಕೊಂಡಿದ್ದಾರೆ.   ಈ  ಪಟ್ಟಿಯಲ್ಲಿ  ಅರಿಸ್ಟಾ ನೆಟ್ವರ್ಕ್ ಸಿಇಓ ಜಯಶ್ರೀ ಉಳ್ಳಾಲ್ 1.7 ಬಿಲಿಯನ್ ಡಾಲರ್  ಸಂಪತ್ತಿನೊಂದಿಗೆ  16 ನೇ ಸ್ಥಾನದಲ್ಲಿದ್ದರೆ,  ಸಿಂಟೆಲ್ ಐಟಿ ಸಹ-ಸಂಸ್ಥಾಪಕಿ ನೀರ್ಜಾ ಸೇಥಿ  1 ಬಿಲಿಯನ್  ಡಾಲರ್‌  ಆಸ್ತಿಯೊಂದಿಗೆ 26 ನೇ ಸ್ಥಾನಪಡೆದುಕೊಂಡಿದ್ದಾರೆ.

ಕಾನ್ಪ್ಲುಯಂಟ್‌     ಸಂಸ್ಥೆಯ   ಸಹ-ಸಂಸ್ಥಾಪಕಿ ನೇಹಾ ನಾರ್ಖಡೆ  925 ಮಿಲಿಯನ್‌ ಡಾಲರ್ ಗಳು, ಗಿಂಕ್ಗೊ ಬಯೋವರ್ಕ್ಸ್ ಸಹ-ಸಂಸ್ಥಾಪಕಿ ರೇಷ್ಮಾ ಶೆಟ್ಟಿ  750 ಮಿಲಿಯನ್‌ ಡಾಲರ್‌     ಆಸ್ತಿಯೊಂದಿಗೆ 29  ಹಾಗೂ  39 ನೇ ಸ್ಥಾನದಲ್ಲಿದ್ದರೆ,  ಪೆಪ್ಸಿಕೊದ ಸಿಇಓ ಇಂದ್ರ ನೂಯಿ290 ಮಿಲಿಯನ್ ಡಾಲರ್ ಆಸ್ತಿಯೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ 91 ನೇ ಸ್ಥಾನದಲ್ಲಿದ್ದಾರೆ.


ಸುದ್ದಿ ಓದಿ