ಮೊದಲ ವಿವಾಹ ಮಹೋತ್ಸವ ಮನಸ್ಸಿಗೆ ಅಪಾರ ಸಂತಸ ತಂದಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
First wedding anniversary brings immense joy to the mind: Minister Lakshmi Hebbalkar
ಬೆಳಗಾವಿ 22: ಗ್ರಾಮೀಣ ಕ್ಷೇತ್ರದ ಸಾರ್ವಜನಿಕರ ಹಾಗೂ ರೈತರ ಮಕ್ಕಳ ಕಲ್ಯಾಣ ಹಾಗೂ ಇತರ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿಸಿರುವ ಭವ್ಯ ಸಾರ್ವಜನಿಕ ಕಲ್ಯಾಣ ಮಂಟಪದಲ್ಲಿ ಇಂದು ಮೊದಲ ವಿವಾಹ ಮಹೋತ್ಸವ ಜರುಗಿತು. ಈ ಮದುವೆಯಲ್ಲಿ ಪಾಲ್ಗೊಂಡ ಸಚಿವರು, ಮನಸ್ಸಿಗೆ ಅಪಾರ ಸಂತಸ ಹಾಗೂ ತೃಪ್ತಿ ನೀಡಿದೆ ಎಂದು ಪ್ರತಿಕ್ರಿಯಿಸಿದರು. ಗ್ರಾಮದ ಹಿರಿಯರಾದ ಚನ್ನಗೌಡ ಪಾಟೀಲ ಅವರ ಸುಪುತ್ರನ ಮದುವೆ ಸಮಾರಂಭವು ಈ ಸುಸಜ್ಜಿತ ಮಂಟಪದಲ್ಲಿ ವೈಭವದಿಂದ ನಡೆಯಿತು. ನಾವು ಮಾಡಿದ ಅಭಿವೃದ್ಧಿ ಕಾರ್ಯ ಸಾರ್ಥಕವಾದ ಕ್ಷಣ ಇದು ಎಂದು ಹೆಬ್ಬಾಳಕರ್ ಹೇಳಿದರು.ಈ ಶುಭ ಸಂದರ್ಭದಲ್ಲಿ ಪಾಟೀಲ ಕುಟುಂಬದ ನವದಂಪತಿಗಳ ಸುಖಿ ಸಂಸಾರಕ್ಕಾಗಿ ಶುಭ ಹಾರೈಸಿದರು. ಕ್ಷೇತ್ರದ ಜನರ ಸೇವೆಗೆ ಈ ಕಲ್ಯಾಣ ಮಂಟಪ ಸದಾ ಮುಕ್ತವಾಗಿದ್ದು, ನಿಮ್ಮೆಲ್ಲರ ಹಾರೈಕೆ ಸದಾ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇಂತಹ ಕಲ್ಯಾಣ ಮಂಟಪಗಳು ನಿರ್ಮಾಣಗೊಳ್ಳಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 