ಅಂತರರಾಷ್ಟ್ರೀಯ

ಮೊಟ್ಟ ಮೊದಲ ಬಾರಿ “ದೇಶ ಭಕ್ತಿ” ಕಾಯ್ದೆ ಬಳಸಿದ ದೊಡ್ಡಣ್ಣ ಅಮೆರಿಕಾ....!

ಮೊಟ್ಟ ಮೊದಲ ಬಾರಿ “ದೇಶ ಭಕ್ತಿ”  ಕಾಯ್ದೆ  ಬಳಸಿದ ದೊಡ್ಡಣ್ಣ ಅಮೆರಿಕಾ....!

ವಾಷಿಂಗ್ಟನ್, ನ 30-ಅಮೆರಿಕಾ ಮೊಟ್ಟ ಮೊದಲ  ಬಾರಿಗೆ “ದೇಶಭಕ್ತಿ”  ಕಾಯ್ದೆಯನ್ನು ಬಳಸಿದೆ. ಈ ಕಾಯ್ದೆ  ಬಳಸಿದ ಡೊನಾಲ್ಡ್ ಟ್ರಂಪ್  ಅಮೆರಿಕಾದ   ಮೊದಲ ಅಧ್ಯಕ್ಷ  ಎಂಬ ದಾಖಲೆನಿರ್ಮಿಸಿದ್ದಾರೆ.

 ಭಯೋತ್ಪಾದಕ ಚಟುವಟಿಕೆಗೆ   ಸಂಬಂಧಿಸಿದಂತೆ  ಆದಮ್ ಅಮೀನ್ ಹಸೌನ್ ಅಮೆರಿಕಾದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ೫೦ ವರ್ಷ ವಯಸ್ಸಿನ ಆದಮ್  2017 ರಲ್ಲಿಯೇ  ಶಿಕ್ಷೆ  ಅವಧಿ ಪೂರ್ಣಗೊಳಿಸಿದ್ದಾರೆ.  ಪ್ರತಿಕೂಲ ಸಂದರ್ಭದಲ್ಲಿ  ಆತನನ್ನು  ಬಿಡುಗಡೆಗೊಳಿಸದೆ,  ಯಾವುದೇ ವಿಚಾರಣೆಯಿಲ್ಲದೆ ಜೀವಿತಾವಧಿಯನ್ನು   ಜೈಲಿನಲ್ಲಿ  ನಿರ್ಬಂಧಿಸಲು  “ದೇಶ ಭಕ್ತಿ” ಕಾಯ್ದೆಯನ್ನು  ಬಳಸಲಾಗಿದೆ.  ಈ ವಿಷಯ  ಈಗ  ಬೆಳಕಿಗೆ ಬಂದಿದೆ.

ಲೆಬನಾನ್ ಮೂಲದ ಆದಮ್ ನನ್ನು  ಜೂನ್ 2002 ರಲ್ಲಿ ಅಕ್ರಮ ವಲಸೆ ಪ್ರಕರಣದಲ್ಲಿ ಮೊದಲ ಬಾರಿ  ಬಂಧಿಸಲಾಯಿತು.  ನಂತರ   ಅಮೆರಿಕಾ ಭಯೋತ್ಪಾದನೆ ವಿರುದ್ಧ   ಸಮರ  ಘೋಷಿಸಿದ ನಂತರ ಹೆಚ್ಚಿನ  ಬಾರಿ ಆದ ಮ್    ಜೈಲು ಶಿಕ್ಷೆ  ಅನುಭವಿಸುವಂತಾಯಿತು.  ವಾಸ್ತವವಾಗಿ,  ಆತ ನೇರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಆದರೆ ಭಯೋತ್ಪಾದಕ ಚಟುವಟಿಕೆ  ಬೆಂಬಲಿಸುತ್ತಿದ್ದ  ಹಲವು ಮುಸ್ಲಿಂ ಧರ್ಮಾರ್ಥ  ಸಂಸ್ಥೆಗಳಿಗೆ ಅವರು ಭಾರಿ ಪ್ರಮಾಣದ  ದೇಣಿಗೆ ನೀಡಿದ್ದರು.  ಈ ಧರ್ಮಾರ್ಥ  ಸಂಸ್ಥೆಗಳ  ಮೇಲೆ  ಅಮೆರಿಕ ನಿಷೇಧ ವಿಧಿಸಿತ್ತು.

2017 ರಲ್ಲಿ ಆದಮ್‌ಗೆ  ಶಿಕ್ಷೆಯ  ಅವಧಿ ಪೂರ್ಣಗೊಂಡ ನಂತರ   ಆತನ ತಾಯಿನಾಡು  ಲೆಬನಾನ್  ಆಗಲಿ,   ಬೆಳೆದ   ಪ್ಯಾಲೇಸ್ಟಿನಿಯನ್ ಭೂ ಪ್ರದೇಶವನ್ನು ಆಕ್ರಮಿಸಿರುವ  ಇಸ್ರೇಲ್  ನಿರಾಶ್ರಿತನೆಂದು ಒಪ್ಪಿ    ಸ್ವೀಕರಿಸಲು   ನಿರಾಕರಿಸಿದ   ಹಿನ್ನಲೆಯಲ್ಲಿ  ರಾಷ್ಟ್ರೀಯ   ಭದ್ರತಾ   ದೃಷ್ಟಿಯಿಂದ   ಆತನನ್ನು ದೇಶಭಕ್ತಿ ಕಾಯ್ದೆಯ ಸೆಕ್ಷನ್ 407 ರ ಅಡಿಯಲ್ಲಿ  ಜೈಲಿನಲ್ಲೇ ನಿರ್ಬಂಧಿಸಲಾಗಿದೆ. ಒಸಾಮಾ ಬಿನ್ ಲಾಡೆನ್  ಅಮೆರಿಕಾದ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ ವಿದೇಶಿಯರಿಗೆ ಅನ್ವಯವಾಗುವ ಈ ಕಾನೂನನ್ನು ಅಕ್ಟೋಬರ್ 26,2001 ರಂದು  ಅಮೆರಿಕಾ  ಸಂಸತ್ತು ಅಂಗೀಕರಿಸಿತ್ತು.


ಸುದ್ದಿ ಓದಿ