ಬೋರಗಾಂವದ ಟೇಕ್ಸ್ ಟೈಲನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಯಂತ್ರೋಪಕರಣ ಸೇರಿ ಲಕ್ಷಾಂತರ ಸಾಮಗ್ರಿಗಳು ಬೆಂಕಿಗೆ ಆಹುತಿ
ಬೆಳಗಾವಿ : ಜಿಲ್ಲೆಯ ನಿಪ್ಪಾನಿ ತಾಲೂಕಿನ ಬೋರಗಾವ ಪಟ್ಟಣದ ಟೇಕ್ಸ್ ಟೈಲನಲ್ಲಿ ವಿದ್ಯುತ್ ಶಾರ್ಟ್ ಸಕಿರ್ಟ್ ನಿಂದ ಆಕಸ್ಮಿಕ ವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಮತ್ತು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಸಂಭವಿಸಿರುವ ಘಟನೆ ಶನಿವಾರ ಬೆಳಗಿನ ಜಾವದಲ್ಲಿ ನಡೆದಿದೆ.

ದಿ. 25ರoದು ಬೆಳಗಿನ ಜಾವ 4 ಗಂಟೆಯ ಸಮಯದಲ್ಲಿ ಬೋರಗಾoವ ಪಟ್ಟಣ ಹದ್ದಿಯ ಶ್ರೀ ಗಣೇಶ್ ಟೇಕ್ಸಟೈಲನಲ್ಲಿ ಆಕಸ್ಮಿಕವಾಗಿ ವಿದ್ಯೂತ ಶಾರ್ಟ ಸರ್ಕಿಟ್ ನಿoದಾ ಬೆoಕಿ ಹತ್ತಿ 9 ಪಾವರ ಲೂಮ್ ಮಷೀನ ಮತ್ತು ಕಚ್ಚಾ ಮಟೀರಿಯಲ್ಗಗಳು ಬೆಂಕಿಗೆ ಆಹುತಿಯಾಗಿವೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸದಲಗಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿರುವುದಿಲ್ಲಾ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.