ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕ್ಷೇತ್ರೋತ್ಸವ
ಬ್ಯಾಡಗಿ 20: ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ದತ್ತು ಗ್ರಾಮವಾದ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ದಿ. 17ರಂದು ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕ್ಷೇತ್ರೋತ್ಸವವನ್ನು ಭರಮಗೌಡ ರಾಯನಗೌಡ್ರ ಇವರ ಹೊಲದಲ್ಲಿ ಏರಿ್ಡಸಲಾಗಿತ್ತು.
ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಇಂಜಿನಿಯರಿಂಗ್ ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್ ಇವರು ಮಾತನಾಡಿ, ಕೇಂದ್ರದ ದತ್ತು ಗ್ರಾಮಗಳಾದ ಮುಂಡರಗಿ ತಾಲೂಕಿನ ಹಳ್ಳಿಗುಡಿ, ರೋಣ ತಾಲೂಕಿನ ಮಾಡಲಗೇರಿ ಹಾಗೂ ಗದಗ ತಾಲೂಕಿನ ಅಸುಂಡಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ಹಾಗೂ ರೋಗಗಳನ್ನು ತಡೆದುಕೊಳ್ಳುವ ರುದ್ರಾ ತಳಿಯನ್ನು ಪ್ರಾತ್ಯಕ್ಷಿಕೆ ಕೈಗೊಂಡ ತಾಕುಗಳಲ್ಲಿ ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕೆವಿಕೆ ತೋಟಗಾರಿಕೆ ತಜ್ಞರಾದ ಹೇಮಾವತಿ ಹಿರೇಗೌಡರ ಇವರು ರುದ್ರಾ ತಳಿಯು ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆಯಿಂದ ಬಿಡುಗಡೆಯಾಗಿದ್ದು ಬ್ಯಾಡಗಿ ಡಬ್ಬಿಯನ್ನು ಹೋಲುತ್ತದೆ. ಕಾಯಿಗಳು ಒಣಗಿದಾಗ ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಎಕರೆಗೆ 8-10 ಒಣ ಮೆಣಸಿನಕಾಯಿ ಕೊಡುವ ಸಾಮರ್ಥ್ಯ ಹೊಂದಿದೆ. ಪ್ರಾತ್ಯಕ್ಷಿಕೆ ತಾಕುಗಳಲ್ಲಿ ಬೀಜಗಳನ್ನು ಬಿತ್ತುವ ಮುನ್ನ ಪ್ರತಿ ಒಂದು ಕಿಲೋ ಬೀಜಕ್ಕೆ 10 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲ್ಯೂ. ಎಸ್. ಕೀಟನಾಶಕದ ಜೊತೆಗೆ 4 ಗ್ರಾಂ ಟ್ರೈಕೋಡರ್ಮ ವಿರಿಡೆ ಜೈವಿಕ ಶಿಲಿಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಲಾಗಿದೆ. ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಹಳದಿ ಹಾಗೂ ನೀಲಿ ಅಂಟು ಬಲೆಗಳನ್ನು ಹಾಕುವುದರ ಜೊತೆಗೆ ಜೈವಿಕ ಕೀಟನಾಶಕಗಳಾದ ಲೇಖಾನಿಸಿಲಿಯಮ್ ಲೇಖಾನಿ ಹಾಗೂ ಬೆವೆರಿಯಾ ಬಾಸಿಯಾನಾವನ್ನು ಪ್ರತಿ ಲೀಟರ ನೀರಿಗೆ ತಲಾ 5 ಗ್ರಾಂ ನಂತೆ ಬೆರಸಿ ಸಿಂಪಡಿಸಲಾಗಿದೆ. ಇದರಿಂದ ಥ್ರಿಪ್ಸ್ ನುಶಿ ಹಾಗೂ ಜೇಡರ ನುಶಿಗಳ ಬಾಧೆ ಕಡಿಮೆಯಾಗಿದೆ. ಗೋವಿನ ಜೋಳವನ್ನು ಬದು ಬೆಳೆಯಾಗಿ ಹಾಗೂ ಪ್ರತಿ 16 ಮೆಣಸಿನ ಸಾಲುಗಳಿಗೆ ಒಂದು ಸಾಲು ಚಂಡು ಹೂವಿನ ಸಸಿಗಳನ್ನು ಬಲೆ ಬೆಳೆಯಾಗಿ ಬೆಳೆಸಲಾಗಿದೆ, ಇದರಿಂದ ಮುಟುರು ರೋಗ ಹಾಗೂ ಕೀಟಗಳ ಬಾಧೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡುತ್ತಾ ಕಾಯಿ ಕೊರಕ ಕೀಟದ ಹತೋಟಿಗಾಗಿ ಮೋಹಕ ಬಲೆಗಳನ್ನು ಅಳವಡಿಸಲಾಗಿದೆ ಹಾಗೂ ಮೆಣಸಿನಕಾಯಿ ಚಿಬ್ಬು ರೋಗದ ಹತೋಟಿಗಾಗಿ 5 ಗ್ರಾಂ ಸ್ಯೂಡೋಮೊನಾಸ್ ಪ್ಲೋರೋಸೆನ್ಸ್ ಜೈವಿಕ ಶಿಲಿಂದ್ರನಾಶಕವನ್ನು ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪಡಿಸಲಾಗಿದೆ ಎಂದು ಸಮಗ್ರ ಬೆಳೆ ನಿರ್ವಹಣಾ ಕ್ರಮಗಳನ್ನು ವಿವರಿಸಿದರು.
ಭರಮಗೌಡ ರಾಯನಗೌಡ್ರ ಇವರು ತಮ್ಮ ಹೊಲದಲ್ಲಿ ಕೈಗೊಂಡ ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಿದ ವಿವಿಧ ತಂತ್ರಜಾನಗಳ ಕುರಿತು ವಿವರಿಸಿದರು ಹಾಗೂ ರುದ್ರಾ ತಳಿಯು ಉತ್ತಮ ಇಳುವರಿ ಕೊಡುವುದರ ಜೊತೆಗೆ ಕೀಟ ಮತ್ತು ರೋಗಗಳ ಬಾಧೆ ಕಡಿಮೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಕ್ಷೇತ್ರೋತ್ಸವದಲ್ಲಿ ಗ್ರಾಮದ ಯುವಕರು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು. ಸಮಾರಂಭದ ಪೂರ್ವದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯ ವಿವಿಧ ಪ್ರಾತ್ಯಕ್ಷಿಕೆ ತಾಕುಗಳಿಗೆ ರೈತರ ಭೆಟ್ಟಿಯನ್ನು ಏರಿ್ಡಸಲಾಗಿತ್ತು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 