ಮೂಡಲಗಿ

ನಿವೃತ್ತಿ ನಿಮಿತ್ತ ಮುಖ್ಯಾಧ್ಯಾಪಕ ಕನಕಿಕೋಡಿಗೆ ಸನ್ಮಾನ

ನಿವೃತ್ತಿ ನಿಮಿತ್ತ ಮುಖ್ಯಾಧ್ಯಾಪಕ ಕನಕಿಕೋಡಿಗೆ ಸನ್ಮಾನ
ಮೂಡಲಗಿ ನಿವೃತ್ತ ಪ್ರಧಾನ ಗುರು ಕನಕಿಕೋಡಿ ಅವರನ್ನು ಶಾಲಾ ಎಸ್‍ಡಿಎಮ್‍ಸಿ ಹಾಗೂ ಸಿಬ್ಬಂದಿ ವರ್ಗ ಸನ್ಮಾನಿಸುತ್ತಿರ

ಮೂಡಲಗಿ 19: ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಶೈಕ್ಷಣಿಕ ಕಾಳಜಿಯುಳ್ಳ ಶಿಕ್ಷಕರೊಬ್ಬರ ಪ್ರಯತ್ನದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು. ಮಕ್ಕಳ ಜೊತೆ ಮಕ್ಕಳಾಗಿದ್ದು ಪಾಠ ಮಾಡುವ ಅಚ್ಚುಮೆಚ್ಚಿನ ಗುರು. ಆದರೆ ಶಾಲಾ ಮಕ್ಕಳಿಗೆ, ಪಾಲಕರಿಗೆ, ಎಸ್‍ಡಿಎಮ್‍ಸಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಶಿಕ್ಷಕನ ನಿವೃತ್ತಿಯಿಂದಾಗಿ ಗ್ರಾಮದಲ್ಲಿ ಬೇಸರದ ಛಾಯೆ ಮೂಡಿದೆ. 

ತಾಲೂಕಿನ ತಳಕಟನಾಳ ಸರಕಾರಿ ಶಾಲೆಯಲ್ಲಿ ಪ್ರಧಾನ ಗುರುಗಳಾಗಿದ್ದ ರವೀಂದ್ರ ಕನಕಿಕೋಡಿ ಅವರು ಕಳೆದ ತಿಂಗಳು ನಿವೃತ್ತರಾಗಿದ್ದರು ಅದರ ಪ್ರಯುಕ್ತ ಅವರನ್ನು ಶಾಲಾ ಮತ್ತು ಎಸ್‍ಡಿಎಮ್‍ಸಿ ಸಿಬ್ಬಂದಿ, ಗಣ್ಯರು ಸತ್ಕರಿಸಿ ಬಿಳ್ಕೊಟ್ಟು ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಕೋರಿದರು.

ಅತೀ ಕಡಿಮೆ ಮಕ್ಕಳು ಕಲೆಯುವ ಶಾಲೆಯಲ್ಲಿ 500 ಸಂಖ್ಯೆಗೆ ಏರಿಕೆ ಕಂಡ ಮಕ್ಕಳ ಪಟಸಂಖ್ಯೆ ನೋಡಿದ ಬಿಇಒ ಅಜೀತ ಮನ್ನಿಕೇರಿ ಅವರು ಇವರನ್ನು ಶ್ಲಾಘಿಸಿ, ಸತ್ಕರಿಸಿ ಗೌರವಿಸಿದ್ದಾರೆ. ಇವರ ಧರ್ಮ ಪತ್ನಿಯವರು ಕೂಡ ಸಧ್ಯ ಕನ್ನಡ ಶಿಕ್ಷಕಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.

ಸುದ್ದಿ ಓದಿ