ನೂತನ ಅಧ್ಯಕ್ಷರಿಗೆ ಸನ್ಮಾನ
ಶಿಗ್ಗಾವಿ 22: ಬನ್ನೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಬನ್ನೂರು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸಿ ನಿಮಗೆ ಲಭಿಸಿದ ಅವಕಾಶದ ಸದ್ಭಳಕೆ ಆಗಲಿ ಎಂದು ಭಾರತ್ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರು ಶುಭ ಹಾರೈಸಿದರು.
ತಾಲೂಕಿನ ಬನ್ನೂರಗ್ರಾಮ ಪಂಚಾಯತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಲ್ಲಿ ಒಪ್ಪಂದದಂತೆ ಮೊದಲನೇ ಅವಧಿಯ ಅಧ್ಯಕ್ಷರಾದ ಖಾಧರ್ ಭಿ ದೊಡ್ದಮನಿ ಅವರತೆರೆವಾದ ಸ್ನಾನಕ್ಕೆ 2 ನೇ ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾದ ಸರೋಜಾ ರಾಮಚಂದ್ರ್ಪ ಕಮ್ಮಾರ ಅವರಿಗೆ ಸನ್ಮಾನಿಸಿ ಅಭಿನಂದಿಸಿ ಸಿಹಿ ತಿನಿಸಿ ಮಾತನಾಡಿ ನಿಮ್ಮ ಅವಧಿಯಲ್ಲಿ ಇತರರಿಗೆ ಮಾದರಿಯಾಗುವ ಕೆಲಸ ಕಾರ್ಯಗಳು ನೆಡೆಯಲಿ ಎಂದು ಹಾರೈಸಿದರು.
ಆ ಸಂದರ್ಭದಲ್ಲಿ ಬನ್ನೂರುಗ್ರಾಮ ಪಂಚಾಯತಿ ಸದಸ್ಯರಾದ ಪಖರುದ್ದೀನ್ ಹಕ್ಕಿ, ಗಿರಿಜವ್ವ ಭರಮಪ್ಪ ಹರಿಜನ, ಚಂದ್ರಕಲಾ ಪೋಲೀಸ್ಗೌಡ್ರು, ಪುಷ್ಪ ವೀರಭದ್ರಗೌಡ ಪೋಲೀಸ್ಗೌಡ್ರು, ಖಾದರ್ ಭೀದೊಡ್ಡಮನಿ ಮುಖಂಡರಾದ ಖಲಾಂದರ್ ದೊಡ್ಡಮನಿ, ಜಗದಿಶ ಕಮ್ಮಾರ, ಹೂವನಗೌಡ ಪೋಲೀಸ್ಗೌಡ್ರ, ಭೀಮಪ್ಪ ಹರಿಜನ ಉಪಸ್ಥಿತರಿದ್ದರು.