ಅಂತರರಾಷ್ಟ್ರೀಯ

ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಕೋವಿಡ್ ರೂಪಾಂತರಗಳ ಭೀತಿ- ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಕೋವಿಡ್ ರೂಪಾಂತರಗಳ ಭೀತಿ- ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ
ಮಾಸ್ಕೋ, ಜುಲೈ 21 :- ಡೆಲ್ಟಾ ರೂಪಾಂತರಕ್ಕಿಂತ ಮತ್ತಷ್ಟು ತೀವ್ರವಾದ ಸಾಂಕ್ರಾಮಿಕ ಹಾಗು ಅಪಾಯಕಾರಿ ಕೋವಿಡ್ ರೂಪಾಂತರಗಳು ಮನುಕುಲಕ್ಕೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಎಚ್ಚರಿಸಿದೆ. ‘ಸೋಂಕು ಹರಡುವಿಕೆ ಹೆಚ್ಚಾದಂತೆ ರೂಪಾಂತರಿಗಳು ಹೊರಹುಮ್ಮುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ರೂಪಾಂತರಗಳು ಡೆಲ್ಟಾ ರೂಪಾಂತರಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ. ಇವು ಮನುಕುಲಕ್ಕೆ ಮತ್ತಷ್ಟು ಅಪಾಯಕಾರಿಯಾಗಲಿವೆ ಎಂದು ಡಬ್ಲ್ಯು ಎಚ್‍ ಒ ಮುಖ್ಯಸ್ಥ ಟೆಡ್ರೋಸ್ ಅಧೋನಮ್‍ ಗೆಬ್ರಿಯೆಸಸ್‍ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ 138ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ ಹೇಳಿದ್ದಾರೆ. ವಿಶ್ವಾದ್ಯಂತ ಲಸಿಕೆ ಆವಿಷ್ಕಾರ ಮತ್ತು ನೀಡಿಕೆ ಪ್ರಗತಿಯಲ್ಲಿದ್ದರೂ, ಹಾಗೂ ಸಾಂಕ್ರಾಮಿಕ ತಡೆಗೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮತ್ತೊಂದು ಕೊರೋನಾ ವೈರಸ್‍ ಅಲೆ ಸನ್ನಿಹಿತದ ಅಪಾಯವಿದೆ. ಬಡ ರಾಷ್ಟ್ರಗಳಲ್ಲಿ ಶೇ 1ರಷ್ಟು ಜನಸಂಖ್ಯೆ ಮಾತ್ರವೇ ಒಂದು ಡೋಸ್ ಲಸಿಕೆ ಪಡೆದಿದೆ ಎಂದು ಗೆಬ್ರಿಯೆಸಸ್‍ ಹೇಳಿದ್ದಾರೆ.

ಸುದ್ದಿ ಓದಿ