ಯುವ ಕಾಂಗ್ರೆಸ್ ಅಧ್ಯಕ್ಷ ನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ : ಕೊಲೆಗೆ ವಿಫಲ ಯತ್ನ : ಹಲ್ಲೆ ಖಂಡಿಸಿ ಕಾಂಗ್ರೆಸಿಗರ ಪ್ರತಿಭಟನೆಗೆ ನಿರ್ಧಾರ

ಯುವ ಕಾಂಗ್ರೆಸ್ ಅಧ್ಯಕ್ಷ ನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ : ಕೊಲೆಗೆ ವಿಫಲ ಯತ್ನ : ಹಲ್ಲೆ ಖಂಡಿಸಿ ಕಾಂಗ್ರೆಸಿಗರ ಪ್ರತಿಭಟನೆಗೆ ನಿರ್ಧಾರ

ಬೆಳಗಾವಿ : ಯುವ ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರದಲ್ಲಿ ನಡೆದಿದೆ.‌

   ಕಾಗವಾಡ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಅಪರಾಜ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ದ್ವಿಚಕ್ರ ಮೇಲೆ ಬಂದಿದ್ದ ದುಷ್ಕರ್ಮಿಗಳು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಘಟನೆ ನಡೆದಿದೆ.

  ಪ್ರಶಾಂತ ಅವರನ್ನ ಅಡ್ಡಗಟ್ಟಿ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದು ಪ್ರಶಾಂತ ಅಪರಾಜಗೆ ಕಾಗವಾಡ ಸಾರ್ವಜನಿಕ ತಾಲ್ಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಶಾಂತ ಈತ ಪ್ರಾಣಹಾನಿಯಿಂದ  ಪಾರಾಗಿದ್ದಾರೆ.

  ಈ ಮೊದಲು ಕಾಗವಾಡ ಬಿಜೆಪಿ ಶಾಸಕ ಆಪ್ತನಾಗಿದ್ದ ಪ್ರಶಾಂತ ಕೆಲದಿನಗಳ ಹಿಂದೆ ಕಾಂಗ್ರೆಸ್ ಸೇರಿ ಪಕ್ಷದ ಸಂಘಟನೆ ತೀವ್ರಗೊಳಿಸಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಮುಖಂಡನ ಹಲ್ಲೆ ಖಂಡಿಸಿ ಇಂದು ಐನಾಪೂರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯರು ಐನಾಪೂರ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಇದೊಂದು ರಾಜಕೀಯ ಪ್ರೇರಿತ ಹಲ್ಲೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆನಡೆಯುತ್ತಿದೆ. ಪ್ರಶಾಂತಗೆ ಮೂರು ನಾಲ್ಕು ಬಾರಿ ಚೂರಿಯಿಂದ ಇರಿದ ದುಷ್ಕರ್ಮಿಗಳು ಫರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಪ್ರಶಾಂತಗೆ ಯಾವುದೇ ಗಂಭಿರ ಗಾಯವಾಗಿಲ್ಲ, ಹೊಟ್ಟೆ ಭಾಗದಲ್ಲಿ ಹಾಗೂ ಕೈಗೆ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿದಿದೆ. ಕಾಗವಾಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 


ಸುದ್ದಿ ಓದಿ