ಉಗಾಂಡಾದಲ್ಲಿ ನಕಲಿ ಲಸಿಕೆ ಹಾವಳಿ: ಹಲವರ ಸಾವು
ಮಾಸ್ಕೋ, ಜುಲೈ 1: ಉಗಾಂಡಾದಲ್ಲಿ 800 ಕ್ಕೂ ಹೆಚ್ಚು ಜನರಿಗೆ ನಕಲಿ ಕೊರೋನ ಲಸಿಕೆ ನೀಡಿದ್ದು ಪರಿಣಾಮ ಕೆಲವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಡೈಲಿ ಮಾನಿಟರ್ ಪತ್ರಿಕೆ ಬುಧವಾರ ವರದಿ ಮಾಡಿದೆ.
ಘಟನೆಯ ಸಂಬಂದ ಕಂಪಾಲಾದಲ್ಲಿ ನಕಲಿ ಲಸಿಕಾ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಸಂಚಿನಲ್ಲಿ ಭಾಗಿಯಾಗಿರುವ ಇಬ್ಬರು ದಾದಿಯರನ್ನು ಬಂಧಿಸಿದ್ದಾರೆ ಎಂದೂ ವರದಿಯಾಗಿದೆ.
ಆರೋಗ್ಯ ಮೇಲ್ವಿಚಾರಣಾ ವಿಭಾಗ. ವರದಿಯ ಪ್ರಕಾರ, ಮೇ 15 ರಿಂದ ಜೂನ್ 17 ರವರೆಗೆ ದೇಶದ ರಾಜಧಾನಿ ಕಂಪಾಲಾದಲ್ಲಿ ನಕಲಿ ಲಸಿಕೆಗಳನ್ನು ನೀಡಲಾಗಿದೆ ಈಗ ಓಡಿಹೋಗಿರುವ ವೈದ್ಯರು ಸೇರಿದಂತೆ ಹಲವಾವು ಶಂಕಿತರು ಈ ಯೋಜನೆಯ ಸಂಚಿನಲ್ಲಿ ಭಾಗಿಯಾಗದ್ದಾರೆ ಎನ್ನಲಾಗಿದೆ.
ಬಾಟಲುಗಳಲ್ಲಿ ನೀರು ಹಾಕಿ ಅವುಗಳನ್ನು ಜನರಿಗೆ ಮತ್ತು ಕಂಪನಿಗಳಿಗೆ ಮಾರಾಟ ಮಾಡುತ್ತಾರೆ ಎಂದು ಪತ್ರಿಕೆ ಹೇಳಿದೆ. "ಈ ಲಸಿಕೆಯ ಲೇಬಲ್ ಮೇಲಿನ ವಿಷಯಗಳು ಎಲ್ಲೋ ಕದ್ದದ್ದಾಗಿರಬಹುದು ಎಂದು ಶಂಕಿಸಲಾಗಿದೆ.
ನಿಜವಾದ ಕೊರೊನ ಲಸಿಕೆಗಳಿಗೆ ಹೋಲಿಸಿದರೆ ಅಕ್ರಮ ವೈಲ್ ಗಳ ಔಷಧ ಪ್ರಮಾಣವೂ ಕಡಿಮೆಯಾಗಿದೆ ಮತ್ತು ಅವುಗಳ ಕ್ಯಾಪ್‌ಗಳು ಸಹ ಮೃದುವಾಗಿದೆ ಎಂದೂ ವರದಿಯಾಗಿದೆ.