ಅಂತರರಾಷ್ಟ್ರೀಯ

ಫ್ರಾನ್ಸ್ : ಮೊಡೆರ್ನಾ ಲಸಿಕೆ ವಿತರಣೆಗೆ ಸಿದ್ಧತೆ

ಫ್ರಾನ್ಸ್ : ಮೊಡೆರ್ನಾ ಲಸಿಕೆ ವಿತರಣೆಗೆ ಸಿದ್ಧತೆ

ಮಾಸ್ಕೋ, ಜ 11: ಅಮೆರಿಕದ ಔಷಧೀಯ ಕಂಪನಿ ಮೊರ್ಡೆನಾ  ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯನ್ನು ಸ್ವೀಕರಿಸಲಿರುವ  ಫ್ರಾನ್ಸ್, ಮೊದಲ ಹಂತದಲ್ಲಿ ದೇಶದ ಅತ್ಯಂತ    ಸೋಂಕಿತ ಪ್ರದೇಶಗಳಲ್ಲಿ ವಿತರಿಸಲಿದೆ ಎಂದು ಫ್ರೆಂಚ್ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ವಾರ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಕೊರೋನಾ ವೈರಸ್ ಬಳಕೆಯನ್ನು ಅನುಮೋದಿಸಿತು. "ಈ ದೃಢೀಕರಣವು ಸೋಮವಾರದ ವೇಳೆಗೆ ಮೊದಲ ಡೋಸೇಜ್ ವಿತರಣೆಗೆ ದಾರಿ  ಮಾಡಿಕೊಡುತ್ತದೆ” ಎಂದು ಭಾನುವಾರ ತಡವಾಗಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.ಈ ವಾರ ಅಮೆರಿಕ ನಿರ್ಮಿತ ಲಸಿಕೆಯ 50 ಸಾವಿರಕ್ಕೂ ಅಧಿಕ ಡೋಸ್ ಮತ್ತು  ಜೂನ್ ಅಂತ್ಯದ ವೇಳೆಗೆ ಸುಮಾರು 8 ಮಿಲಿಯನ್ ಡೋಸ್ಗಳನ್ನು ಸರ್ಕಾರ ನಿರೀಕ್ಷಿಸುತ್ತದೆ ಎಂದು  ಹೇಳಿಕೆಯಲ್ಲಿ ಸೇರಿಸಲಾಗಿದೆ. ಡಿಸೆಂಬರ್ 24 ರಂದು ಎಚ್‌ಎಎಸ್ ಅನುಮೋದಿಸಿದಾಗಿನಿಂದ   ಸಾಮೂಹಿಕ ರೋಗನಿರೋಧಕ ಅಭಿಯಾನದಲ್ಲಿ ಫ್ರಾನ್ಸ್ ಫಿಜರ್, ಬಯೋನೆಕ್    ಲಸಿಕೆಯನ್ನು ಬಳಸುತ್ತದೆ.

          

ಸುದ್ದಿ ಓದಿ