ಅಂತರರಾಷ್ಟ್ರೀಯ

ಹೆಚ್ಚಿದ ಕೋವಿಡ್ ಸೋಂಕು, ಫ್ರಾನ್ಸ್ ನಲ್ಲಿ ಮೂರನೇ ಲಾಕ್‌ಡೌನ್

ಹೆಚ್ಚಿದ ಕೋವಿಡ್   ಸೋಂಕು,   ಫ್ರಾನ್ಸ್ ನಲ್ಲಿ  ಮೂರನೇ  ಲಾಕ್‌ಡೌನ್

ಪ್ಯಾರಿಸ್, ಏಪ್ರಿಲ್ 4:ದೇಶದಲ್ಲಿ ಕೊರೊನ ಸೋಂಕು ಹೆಚ್ಚಳದ  ಕಾರಣ   ಫ್ರಾನ್ಸ್  ಮೂರನೇ ರಾಷ್ಟ್ರೀಯ ಲಾಕ್‌ಡೌನ್‌ ಘೋಷಿಸಿದೆ. ಹೊಸ ಲಾಕ್‌ಡೌನ್ ಅಡಿಯಲ್ಲಿ ಎಲ್ಲಾ ಶಾಲೆಗಳು ಮತ್ತು ಅನಿವಾರ್ಯವಲ್ಲದ ಅಂಗಡಿಗಳನ್ನು 4  ವಾರಗಳವರೆಗೆ ಮುಚ್ಚಲಾಗುವುದು, ಮತ್ತು 19:00 ರಿಂದ 06:00 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ, ಆದರೆ ಮಂಗಳವಾರದಿಂದ ಜನರು 10 ಕಿ.ಮೀ ಗಿಂತ ಹೆಚ್ಚು ಪ್ರಯಾಣಿಸಲು ಸಕಾಲಿಕ ಕಾರಣ ನೀಡಬೇಕಾಗುತ್ತದೆ ಎಂದು ಸರ್ಕಾರ ಹೇಳಿರುವುದಾಗಿ ಶುಕ್ರವಾರ ವರದಿಯಾಗಿದೆ. ಪ್ರಸ್ತುತ ಫ್ರಾನ್ಸ್ ದೇಶಾದ್ಯಂತ ಐಸಿಯುಗಳಲ್ಲಿ ಸುಮಾರು 5,000 ಸಾವಿರ ಕೋವಿಡ್ ರೋಗಿಗಳಿದ್ದಾರೆ.  ಶುಕ್ರವಾರ, ದೇಶದಲ್ಲಿ 46ಸಾವಿರದ ,677 ಹೊಸ ಪ್ರಕರಣಗಳು ಮತ್ತು 304 ಸಾವುಗಳು ದಾಖಲಾಗಿದ್ದು,  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೋವಿಡ್ ರೋಗಿಗಳಿಗೆ ಹೆಚ್ಚಿನ ಆಸ್ಪತ್ರೆ,  ಹಾಸಿಗೆ ಸೌಲಭ್ಯದ ಒದಗಿಸುವ ಭರವಸೆ  ನೀಡಿದ್ದಾರೆ. 


ಸುದ್ದಿ ಓದಿ