ಅಂತರರಾಷ್ಟ್ರೀಯ

ಒಂದೇ ದಿನ 21 ಸಾವಿರ ರೂಪಾಂತರಿ, ಕರೋನ ಪ್ರಕರಣ ವರದಿ

ಒಂದೇ ದಿನ 21 ಸಾವಿರ ರೂಪಾಂತರಿ, ಕರೋನ ಪ್ರಕರಣ  ವರದಿ

ಪ್ಯಾರಿಸ್, ಜನವರಿ 8 : ಫ್ರಾನ್ಸ್‌ನಲ್ಲಿ ಒಂದೇ  ದಿನ 21 ಸಾವಿರಕ್ಕೂ ಹೆಚ್ಚು  ಬ್ರಿಟನ್ ಮಾದರಿಯ ಹೊಸ ರೂಪಾಂತರಿ  ಕರೋನ  ಪ್ರಕರಣ ವರದಿಯಾಗಿರುವುದು ಆತಂಕಕ್ಕೆ  ಕಾರಣವಾಗಿದೆ.  ಸಾರ್ವಜನಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ ಗುರುವಾರ,  21,703 ಹೊಸ ಕರೋನ ಸೋಂಕು  ಪ್ರಕರಣ ದಾಖಲಾಗಿದೆ.  ಈವರೆಗೆ ದೇಶದಲ್ಲಿ ಒಟ್ಟು ಈಗ 2.7 ಮಿಲಿಯನ್ ಕೊರೋನ ಪ್ರಕರಣಗಳು ವರದಿಯಾಗಿದೆ.ಕಳೆದ ದಿನದಲ್ಲಿ ಫ್ರೆಂಚ್ ಆಸ್ಪತ್ರೆಗಳಲ್ಲಿ ಕರೋನ ಸೋಂಕಿನಿಂದ 277 ಜನರು ಸಾವನ್ನಪ್ಪಿದ್ದು, ಈವರೆಗೆ   ಮೃತರ ಸಂಖ್ಯೆ  66,841 ಕ್ಕೆ ಏರಿಕೆಯಾಗಿದೆ.  ಆರೋಗ್ಯ ಸಚಿವ ಆಲಿವಿಯರ್ ವೆರನ್ ಮಾತನಾಡಿ, ಆರು ವಾರಗಳ ಅವಧಿಯಲ್ಲಿ  ಲಸಿಕೆ ಹಾಕುವ  ಮೂಲಕ  ಹೊಸ ಕೊರೋನ ಪ್ರಕರಣಗಳನ್ನು  ನಿಗ್ರಹಿಸಲು ಮತ್ತಷ್ಟು ವೇಗವಾಗಿ  ಹೆಜ್ಜೆ ಹಾಕುವುದಾಗಿ ಸಚಿವರು ಹೇಳಿದ್ದಾರೆ.  




ಸುದ್ದಿ ಓದಿ