ಅಂತರರಾಷ್ಟ್ರೀಯ

ಫ್ರಾನ್ಸ್‌ನಲ್ಲಿ 30 ಲಕ್ಷ ದಾಟಿದ ಕೊರೋನ ಪೀಡಿತರ ಸಂಖ್ಯೆ.

ಫ್ರಾನ್ಸ್‌ನಲ್ಲಿ 30 ಲಕ್ಷ ದಾಟಿದ  ಕೊರೋನ ಪೀಡಿತರ ಸಂಖ್ಯೆ.

ಪ್ಯಾರಿಸ್, ಜನವರಿ 18 :  ಫ್ರಾನ್ಸ್‌ನಲ್ಲಿ ದೃಡಪಡಿಸಿದ  ಕೊರೋನ ರೋಗಿಗಳ ಸಂಖ್ಯೆ 2.9 ದಶಲಕ್ಷ  ಮೀರಿದೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆ ಸಾಂಟೆ ಪಬ್ಲಿಕ್ ಭಾನುವಾರ ವರದಿ ಮಾಡಿದೆ.ಆರೋಗ್ಯ ತಜ್ಞರ ಪ್ರಕಾರ  ಕಳೆದ 24 ಗಂಟೆಗಳಲ್ಲಿ 16,642 ಹೊಸ ಪ್ರಕರಣಗಳು ಖಚಿತವಾಗಿದ್ದು, ದೃಡಪಡಿಸಿದ ಪ್ರಕರಣಗಳ ಒಟ್ಟು ಸಂಖ್ಯೆ ದೇಶದಲ್ಲಿ 2,910,989 ಕ್ಕೆ ಏರಿಕೆಯಾಗಿದೆ.ಈ ನಡುವೆ  ದೇಶದಲ್ಲಿ  ಈವರೆಗೆ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ  141 ರಿಂದ 70,283 ಕ್ಕೆ ಏರಿಕೆಯಾಗಿದೆ.  ಡಿಸೆಂಬರ್ 27 ರಂದು, ಫ್ರಾನ್ಸ್ ಸೋಂಕಿನ  ವಿರುದ್ಧ ಲಸಿಕಾ  ಅಭಿಯಾನವನ್ನು ಪ್ರಾರಂಭಿಸಿದೆ.   ಫ್ರೆಂಚ್ ಆರೋಗ್ಯ ಸಚಿವಾಲಯದ ಪ್ರಕಾರ, ಭಾನುವಾರದ ವೇಳೆಗೆ 422,000 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 



ಸುದ್ದಿ ಓದಿ