ಮೂಡಲಗಿ

ಪ್ರತಿಯೊಬ್ಬರೂ ಮೊದಲು ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಬಂದಿ

ಪ್ರತಿಯೊಬ್ಬರೂ ಮೊದಲು ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಬಂದಿ

ಮೂಡಲಗಿ 10: ಪಟ್ಟಣದ ವೀಣಾ ಹಾಗೂ ಶ್ರೀನಿವಾ ಕನಕರಡ್ಡಿಯವರ ವೆಂಕಟೇಶ ಆಸ್ಪತ್ರೆಯಿಂದ ಏರಿ​‍್ಡಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರು, ಮಧ್ಯಮ ವರ್ಗದವರಿಗೆ ವರದಾನವಾಗಿದೆ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತರ ಬಾಲಶೇಖರ ಬಂದಿ ಹೇಳಿದರು. 

ವೆಂಕಟೇಶ ಆಸ್ಪತ್ರೆಯಲ್ಲಿ ನಡೆದ ಮೂಡಲಗಿ ತಾಲೂಕಾ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುವಂತಾಗಿದೆ. ಕಾರಣ ಪ್ರತಿಯೊಬ್ಬರೂ ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾವು ಆರೋಗ್ಯವಾಗಿದ್ದರೆ ಮಾತ್ರ ಏನ್ನನಾದರೂ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು. 

ವೆಂಕಟೇಶ ಆಸ್ಪತ್ರೆಯ ಡಾ. ರಾಹುಲ್ ಬೆಳವಿ ಮಾತನಾಡಿ, ಹೆಚ್ಚಿನ ವೆಚ್ಚ ಭರಿಸಿ ತಪಾಸಣೆ ಮಾಡಿಸಿಕೊಳ್ಳಲು ಬಡವರಿಗೆ ಕಷ್ಟ. ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು. ಈಗಾಗಲೇ ವೆಂಕಟೇಶ ಆಸ್ಪತ್ರೆಯಿಂದ ವಿವಿಧ ಗ್ರಾಮಗಳಲ್ಲಿ ನೂರಾರು ರೋಗಿಗಳಿಗೆ ಉಚಿತ ತಪಾಸಣೆ ಮಾಡುವ ಮೂಲಕ ಬಡವರ ಕಷ್ಟಕ್ಕೆ ಸಹಕಾಯವಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ಲಿಂಗಪ್ಪ ಗಾಡವಿ, ಮಾರುತಿ ಮಾವರಕರ, ಲಕ್ಷ್ಮಣ ಅಡಿಹುಡಿ, ಮಲ್ಲು ಬೋಳನವರ, ಸುಭಾಷ ಗೋಡ್ಯಾಗೋಳ, ಭೀಮಶಿ ತಳವಾರ, ಸುರೇಶ ಪಾಟೀಲ, ಪ್ರವೀಣ ಮಾವರಕರ, ಚಂದ್ರಶೇಖರ ಪತ್ತಾರ, ಅಶೋಕ ಶಿದ್ದಲಿಂಗಪ್ಪಗೋಳ, ಲಕ್ಷ್ಮಣ ಮೇಳಿಗೇರಿ, ಪುಟ್ಟು ಗಾಡವಿ, ಸುಭಾಷ ಕಡಾಡಿ, ಸುನಿಲ್ ಗಸ್ತಿ, ಸಚೀನ ಪತ್ತಾರ, ಆಸ್ಪತ್ರೆಯ ಸಿಬ್ಬಂದಿ ವರ್ಧಮಾನ ಬೋಳಿ ಹಾಗೂ ಅನೇಕ ಪತ್ರಕರ್ತರು ಇದ್ದರು.   


ಸುದ್ದಿ ಓದಿ