ಮೂಡಲಗಿ

ಪ್ರತಿಯೊಬ್ಬ ಪ್ರಜೆಯು ಪರಿಸರ ಕಾಳಜಿ ಹೊಂದಬೇಕಿದೆ: ಬಸಳಿಗುಂದಿ

ಪ್ರತಿಯೊಬ್ಬ ಪ್ರಜೆಯು  ಪರಿಸರ  ಕಾಳಜಿ  ಹೊಂದಬೇಕಿದೆ: ಬಸಳಿಗುಂದಿ

ಮೂಡಲಗಿ 06: 21ನೇ ಶತಮಾನದಲ್ಲಿ ಪರಿಸರ ಮಾಲಿನ್ಯವು ಪ್ರತಿಯೊಬ್ಬರಿಂದ ಆಗುತ್ತಿದ್ದು ಇದಕ್ಕೆ  ಮುಕ್ತಿ ನೀಡಬೇಕೆಂದರೆ ಪ್ರತಿಯೊಬ್ಬ ಪ್ರಜೆಯು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವುದು ಹಾಗೂ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಖಾನಟ್ಟಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಣಮಂತ ಬಸಳಿಗುಂದಿ ಅವರು ಕರೆ ನೀಡಿದರು. 

ಸ್ಥಳೀಯ ಆರ್‌.ಡಿ.ಎಸ್‌. ಸಂಸ್ಥೆಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯ್‌.ಕ್ಯೂ,ಎ.ಸಿ. ಹಾಗೂ ಎನ್‌.ಎಸ್‌.ಎಸ್‌. ಘಟಕದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದರು. 

  ನಮ್ಮ ಮುಂದಿನ ಪೀಳಿಗೆಗೆ  ಮಳೆಯ  ಕೊರತೆ  ಉಂಟಾಗಬಹುದು. ಆದ್ದರಿಂದ  ಪ್ರತಿಯೊಬ್ಬ ಪ್ರಜೆಯು  ಪರಿಸರ  ಕಾಳಜಿ  ಹೊಂದುವಂತೆ  ಮಾಡುವುದು ನಮೆಲ್ಲರ  ಜವಾಬ್ದಾರಿ ಎಂದು  ಹೇಳಿದರು.  ಅಲ್ಲದೆ  ವಾಯು ಮಾಲಿನ್ಯಕ್ಕೆ  ಸಂಬಂಧಿಸಿದಂತೆ  ಹೇಳುವುದಾದರೆ  ಅವಶ್ಯವಿದ್ದಾಗ  ಮಾತ್ರ  ವಾಹನಗಳನ್ನು  ಬಳಸಬೇಕು. ಇಂತಹ  ಜವಾಬ್ದಾರಿ  ನಿರ್ವಹಿಸಬೇಕೆಂದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತಿ  ಮೂಡಿಸುವುದು  ಅವಶ್ಯವಿದೆ  ಎಂದು  ಅವರು ತಿಳಿಸಿದರು. 

ವಿದ್ಯಾರ್ಥಿಗಳು ತಮ್ಮ ಗುರಿ ಉದ್ದೇಶವನ್ನು ಅರಿತು ವಿದ್ಯಾಬ್ಯಾಸ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು  ಪಡೆಯಬಹುದು.  ಅದರಂತೆ  ಪ್ರತಿ ವಿದ್ಯಾರ್ಥಿಯು  ಸಮಯವನ್ನು  ವ್ಯರ್ಥಮಾಡದೆ  ತಮ್ಮ ಭವಿಷ್ಯದ  ಬಗ್ಗೆ ಕಾಳಜಿ ವಹಿಸುವುದು ಅವಶ್ಯ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ಬಿ. ಗೋಟೂರೆ ವಹಿಸಿದ್ದರು ಅತಿಥಿಗಳಾಗಿ ಎಸ್‌.ಎನ್‌.ಕುಂಬಾರ ಸಿ.ಸಿ.ಶೆಟ್ಟರ, .ಜೋಸೆಪ್‌.ಎಸ್‌.ಬಿ. ಹಾಗೂ ಕಾಮಣ್ಣಾ ಕಾಳೆ  ವೇದಿಕೆ ಅಲಂಕರಿಸಿದ್ದರು. ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಪ್ರೀತಿ ಹಲಗಲಿ ಹಾಗೂ ಅಶ್ವಿನಿ  ಉಪ್ಪಾರ ನಿರೂಪಿಸಿದರು. ಉನ್ಯಾಸಕ ಎಸ್‌.ಎಮ್‌.ಮುಗಳಖೋಡ ಸ್ವಾಗತಿಸಿದರು. ಸೃಷ್ಟಿ ಸಣ್ಣಕ್ಕಿ ವಂದಿಸಿದರು. 


ಸುದ್ದಿ ಓದಿ