ಜಪಾನ್ ನ ಟೋಕಿಯೋದಲ್ಲಿ ಈ ತಿಂಗಳ 12ರಿಂದ ತುರ್ತು ಪರಿಸ್ಥಿತಿ ಘೋಷಣೆ
ಟೋಕಿಯೋ, ಜುಲೈ 8: ನಗರದಲ್ಲಿ ಜುಲೈ 12ರಿಂದ ಆಗಸ್ಟ್ 22ರವರೆಗೆ ಕೊರೊನಾ ವೈರಸ್ ಸಂಬಂಧಿತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಜಪಾನ್ ಪ್ರಧಾನಿ ಯೊಶಿಹಿಡೆ ಸುಗಾ ಗುರುವಾರ ತಿಳಿಸಿದ್ದಾರೆ.
ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವ ಎರಡು ವಾರಗಳ ಮುನ್ನ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸರ್ಕಾರದ ಕೋವಿಡ್ ನಿರ್ವಹಣಾ ಕೇಂದ್ರದ ಸಭೆಯಲ್ಲಿ ಭಾಗವಹಿಸಿ ಸುಗಾ ಅವರು ಈ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಎನ್ ಎಚ್‍ಕೆ ಸುದ್ದಿ ಮಾಧ್ಯಮ ಪ್ರಸಾರ ಮಾಡಿದೆ.