ಕರ್ನಾಟಕ ಸಮತಾ ಸೈನಿಕ ದಳ ಪದಾಧಿಕಾರಿಗಳ ಆಯ್ಕೆ
Election of Karnataka Samata Sainik Dal office bearers
ಹುಕ್ಕೇರಿ 16: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸುಮತಾ ಸೈನಿಕ ದಳದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಬಿ ಚನ್ನಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾದ ಕಮಲಾ ಮೇಡಂ ಅವರ ಆದೇಶದಂತೆ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶಿವಾಜಿ ಓ ಬಾಲೇಶ್ಗೋಳ ಹಾಗೂ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ತಳವಾರ್ ಅವರ ನೇತೃತ್ವದಲ್ಲಿ ಹುಕ್ಕೇರಿ ತಾಲೂಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರಗಿತು.ಕೋರ್ಟ್ ಸರ್ಕಲ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಸಂಘದ ಎಲ್ಲಾ ಸದಸ್ಯರು ಸೇರಿ ಹೂ ಮಾಲೆ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಶಿವಾಜಿ ಎನ್ ಬಾಲೇಶ್ಗೋಳ ಉಪಾಧ್ಯಕ್ಷರಾಗಿ ರಮೇಶ್ ತಳವಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಲಿ ಬಾಡ್ಕರ್, ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಡ್ವಕೇಟ್ ರಾಜೇಂದ್ರ ಮೂಶಿ, ಜಿಲ್ಲಾ ಕಾರ್ಯದರ್ಶಿಯಾಗಿ ಸೊಹೈಲ್ ಬಾಗವಾನ್, ಸಹ ಕಾರ್ಯದರ್ಶಿಯಾಗಿ ರಾಜೇಂದ್ರ ಕಾಂಬಳೆ ಆಯ್ಕೆಯಾಗಿದ್ದು ಹಾಗೂ ಹುಕ್ಕೇರಿ ತಾಲೂಕ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಬಸಪ್ಪ ಮಾಳಕರಿ, ಸಂಘಟನಾ ಕಾರ್ಯಧ್ಯಕ್ಷರಾಗಿ ಸಾಹುಲ್ ನದಾಫ್ ಉಪಾಧ್ಯಕ್ಷರಾಗಿ ಜಾಫರ್ ನದಾಫ್, ಪ್ರಧಾನ ಕಾರ್ಯದರ್ಶಿಯಾಗಿ ದಸ್ತಗಿರ್ ಬಾಬಾ ಸಾಬ್ ಕಳವಂತ್, ಕಾರ್ಯದರ್ಶಿಯಾಗಿ ಅಜಯ್ ರಾಮಚಂದ್ರ ಹರಬಲೆ, ಖಜಾಂಚಿಯಾಗಿ ಶರಾ್ರಜ್ ಕಾಂಚಾದೇ, ತಾಲೂಕ ಸಂಘಟನಾ ಪ್ರಧಾನ ಸಂಚಾಲಕರಾಗಿ ವಿಠ್ಠಲ್ ಬಂಗಾರಿ, ಸಂಘಟನಾ ಸಂಚಾಲಕರಾಗಿ ಗೌಸ್ ಆಝಮ್ ಜಮಾದಾರ್, ಸಂಚಾಲಕರಾಗಿ ಮಹಮ್ಮದ್ ಆರಿಫ್ ಪಠಾಣ್, ಶಮನ್ ಮುಲ್ತಾನಿ, ಶಂಕರ್ ಭೀಮಪ್ಪ ತಳವಾರ್ ಆಯ್ಕೆಯಾದರು.
ಇದೇ ಸಮಯದಲ್ಲಿ ಮಹಿಳಾ ಘಟಕದ ಕಾಗವಾಡ ತಾಲೂಕ ಅಧ್ಯಕ್ಷರಾಗಿ ಕವಿತಾ ಕಾಂಬಳೆ ಹಾಗೂ ಹುಕ್ಕೇರಿ ತಾಲೂಕ ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಶಾಂತವ್ವ ಹಳವಿ, ತಾಲೂಕ ಅಧ್ಯಕ್ಷರಾಗಿ ಮಂಗಲ್ ಮಾನೆ, ಉಪಾಧ್ಯಕ್ಷರಾಗಿ ಆರತಿ ಕಾಂಬಳೆ, ಖಜಾಂಚಿಯಾಗಿ ಲಗಮವ್ವ ಮಾದರ್, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ನೂಲಿ, ಕಾರ್ಯದರ್ಶಿಯಾಗಿ ಗೌರವ ಮಾಳಗೆ ಆಯ್ಕೆಯಾದರು.ಈ ಸಂದರ್ಭದಲ್ಲಿ ಗೌಸ್ಜ ಲಾಜಂ ಜಮಾದಾರ್, ಸಂಚಾಲಕ ಕಾರ್ಯದರ್ಶಿ ಮಹಮ್ಮದ್ ಅರಿಪ ಪಟಾನ್, ಹುಕ್ಕೇರಿ ತಾಲೂಕಿನ ಎಲ್ಲಾ ಸದಸ್ಯರು ಹಾಗೂ ಚಿಕ್ಕೋಡಿ ಕಾಗವಾಡ ಬೆಳಗಾವಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 